ಭಾರತ, ಏಪ್ರಿಲ್ 7 -- ಕಾಂತಾರ ಸಿನಿಮಾ ಕನ್ನಡ ಚಿತ್ರರಂಗಕ್ಕೊಂದು ಹೊಸ ರೂಪ ನೀಡಿತ್ತು. ಈ ಸಿನಿಮಾವು ದೇಶದಾದ್ಯಂತ ಜನರು ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಕಾಂತಾರ ಅದ್ಭುತ ಯಶಸ್ಸು ಇದರ ಮುಂದುವರಿದ ಭಾಗ ಮಾಡಲು ಸ್ಫೂರ್ತಿಯಾಯಿತು. ಆದರೆ ಇದು ಮುಂದುವರಿದ ಭಾಗವಲ್ಲ, ಈಗಾಗಲೇ ನಾವು ನೋಡಿರುವುದೇ ಭಾಗ 2, ಇನ್ನು ಮುಂದೆ ಬರಲಿರುವುದು ಚಾಪ್ಟರ್ 1 ಎಂದು ರಿಷಬ್‌ ಹೇಳಿದ್ದರು.

ಅದೇನೇ ಇರಲಿ, ಕಾಂತಾರಾ ಚಾಪ್ಟರ್ 1 ಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿರುವುದು ನಿಜ. ಆದರೆ ಈ ಸಿನಿಮಾದ ಬಿಡುಗಡೆ ವಿಳಂಬವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲದರ ನಡುವೆ ಕಾಂತಾರಾ ಚಾಪ್ಟರ್‌ 1ಗೆ ವಿಘ್ನ ಎದುರಾಗಿದೆ ಎಂಬ ಮಾತಿಗೆ ಪುಷ್ಠಿ ನೀಡುವ ಘಟನೆಯೊಂದು ನಡೆದಿದೆ.

ಕಾಂತಾರ ಚಾಪ್ಟರ್ 1ಕ್ಕೆ ಎದುರಾಗುತ್ತಿರುವ ವಿಘ್ನಗಳಿಗೆ ಸಂಬಂಧಿಸಿ ಮಂಗಳೂರಿನಲ್ಲಿ ನಡೆದ ನೇಮವೊಂದರಲ್ಲಿ ದೇವರ ಬಳಿ ಸಂಕಷ್ಟ ತೋಡಿಕೊಂಡಿದ್ದಾರೆ ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ.

ಇದನ್ನೂ ಓದಿ: Kantara Chapter 1: ಕಾಂತಾರ ಚಾಪ್ಟ...