ಭಾರತ, ಏಪ್ರಿಲ್ 12 -- ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 22 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 16 ಹಗರಣಗಳ ತನಿಖೆಗೆ ಆದೇಶ ನೀಡಿದೆ. ಈ ಹಗರಣಗಳೆಲ್ಲವೂ ಹಿಂದಿನ ಬಿಜೆಪಿ ಮತ್ತು ಜೆಡಿಎಸ್‌ ಸರ್ಕಾರದ ಹಗರಣಗಳಾಗಿವೆ. ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಶೇ.40 ಕಮೀಷನ್‌ ಆರೋಪದ ಹಗರಣ ಕುರಿತು ನ್ಯಾಯಮೂರ್ತಿ ಎಚ್.‌ ಎನ್.‌ ನಾಗಮೋಹನ್‌ ದಾಸ್‌ ಸಮಿತಿ ನೀಡಿರುವ ವರದಿ ಕುರಿತು ತನಿಖೆಗೆ ಎಸ್‌ ಐಟಿ ರಚಿಸುವ ನಿರ್ಧಾರ ಕೈಗೊಂಡಿರುವುದು ಹೊಸ ಸೇರ್ಪಡೆ ಅಷ್ಟೇ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಶೇ.40ರಷ್ಟು ಕಮೀಷನ್‌ ಆರೋಪ ಮಾಡಿತ್ತು. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ತನಿಖೆಗಾಗಿ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಸಮಿತಿಯನ್ನು ರಚಿಸಿತ್ತು. ಈ ಮೂಲಕ ಎಸ್‌ ಐ ಟಿ ರಚಿಸಿರುವ ಪ್ರಕರಣಗಳ ಸಂಖ್ಯೆ 8 ಕ್ಕೆ ಏರಿದೆ. ಮೇ 2023 ರಲ್ಲಿ ಕಾಂಗ್ರೆಸ್‌ ಸರ್ಕಾರ ರಚನ...