ಭಾರತ, ಏಪ್ರಿಲ್ 30 -- ಜಾತಿ ಗಣತಿ ವಿವಾದ ಕಾಂಗ್ರೆಸ್ ಪಕ್ಷವನ್ನು ಸುಲಭಕ್ಕೆ ಬಿಡುವಂತೆ ಕಾಣುತ್ತಿಲ್ಲ. ಒಂದು ಕಡೆ ದಲಿತ ವರ್ಗಗಳ ಸಚಿವರು ಮತ್ತು ಶಾಸಕರು ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದರೆ ಮತ್ತೊಂದು ಕಡೆ ಎರಡು ಪ್ರಬಲ ವರ್ಗಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸಚಿವರು ಮತ್ತು ಜನಪ್ರತಿನಿಧಿಗಳು ಜಾರಿಗೊಳಿಸಬಾರದು ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿ ಸಮೀಕ್ಷೆ ನಡೆಸಲು ಆಯೋಗವನ್ನು ನೇಮಕ ಮಾಡಿದ್ದು ಮತ್ತು ವರದಿಯನ್ನುಸ್ವೀಕರಿಸಿದ್ದು ಎರಡೂ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎನ್ನುವುದು ಗಮನಾರ್ಹ.
ಇದೀಗ ವರದಿಯನ್ನು ಜಾರಿಗೊಳಿಸಲೇಕು ಎಂದು ಅಹಿಂದ ಗುಂಪುಗಳು ಪಕ್ಷದ ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಚಳವಳಿ ಆರಂಭಿಸಿವೆ. ಇ ಮೇಲ್, ಪೋಸ್ಟ್ ಕಾರ್ಡ್ ಬರೆಯಲು ನಿರ್ಧರಿಸಿದ್ದಾರೆ. ಈ ಮೂಲಕ ಮಧ್ಯೆ ಪ್ರವೇಶಿಸಿ ವರದಿ ಜಾರಿ ಹಾದಿ ಸುಗಮಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ. ವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.