ಭಾರತ, ಮಾರ್ಚ್ 29 -- ಹುಬ್ಬಳ್ಳಿ: ಐಪಿಎಲ್ ಪಂದ್ಯಾವಳಿಯ 18ನೇ ಆವೃತ್ತಿ ಆರಂಭವಾಗಿ ಕೆಲವೇ ದಿನಗಳಾಗಿವೆ. ಟೂರ್ನಿಯ ಜೋಶ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಐಪಿಎಲ್ ಬೆಟ್ಟಿಂಗ್ ಕೂಡಾ ಅಲ್ಲಲ್ಲಿ ನಡೆಯುತ್ತಿದೆ. ಕೆಲವೊಂದು ಜಾಹೀರಾತುಗಳನ್ನು ನೋಡಿ ಬೆಟ್ಟಿಂಗ್ ಬಲೆಗೆ ಬೀಳುವ ಜನರು ಅಪಾರ ಪ್ರಮಾಣದ ಹಣ ಕಳೆದುಕೊಳ್ಳುತ್ತಾರೆ. ಇರುವ ದುಡ್ಡು ದುಪ್ಪಟ್ಟು ಮಾಡುವ ಕನಸಿನಲ್ಲಿ ಇರುವ ದುಡ್ಡನ್ನೂ ಕಳೆದುಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ, ಜನರಲ್ಲಿ ಬದಲಾವಣೆ ಕಾಣಿಸುತ್ತಿಲ್ಲ. ಈ ನಡುವೆ ಹುಬ್ಬಳ್ಳಿ-ಧಾರವಾಡ ಪೊಲೀಸರ ಬೆಟ್ಟಿಂಗ್ ಜಾಗೃತಿ ಗಮನ ಸೆಳೆಯುತ್ತಿದೆ.
ಟ್ವಿಟರ್‌ನಲ್ಲಿ ಹುಬ್ಬಳ್ಳಿ - ಧಾರವಾಡ ಪೊಲೀಸರು ಶೇರ್ ಮಾಡಿರುವ ಸಣ್ಣ ವಿಡಿಯೋ ತುಣುಕೊಂದು ಜನರ ಗಮನ ಸೆಳೆದಿದೆ. "ಕಷ್ಟಪಟ್ಟು ಗಳಿಸಿದ ಹಣವನ್ನು ಬೆಟ್ಟಿಂಗ್ ಆಡಿ ಕಳೆದುಕೊಳ್ಳಬೇಡಿ," ಎಂದು ಜಾಗೃತಿ ಸಂದೇಶ ನೀಡಿರುವ ಪೊಲೀಸರು, 'ಮೊದಲು ಹಾಗೂ ನಂತರ' ಎಂಬ ಎರಡು ಭಾಗಗಳ ಸಣ್ಣ ವಿಡಿಯೋ ಹಂಚಿಕೊಂಡಿದ್ದಾರೆ.
...
Click here to read full article from source
To read the full article or to get the complete feed from this publication, please
Contact Us.