Bengaluru, ಮೇ 8 -- ಬೆಂಗಳೂರು: ಕಳ್ಳತನ ಮಾಡಿದ್ದ ಮೊಬೈಲ್ ಮರಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರ ಹತ್ಯೆಯಲ್ಲಿ ಕೊನೆಗೊಂಡಿದೆ. ಬಿಹಾರ ಮೂಲದ ಅಬ್ದುಲ್ ಮಲೀಕ್ (52) ಮೃತಪಟ್ಟವರು. ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮನೋಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮನೋಜ್ ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಅಬ್ದುಲ್ ಮಲೀಕ್ ಅವರ ಕಚೇರಿಗೆ ತೆರಳಿದ್ದ ಮನೋಜ್, ಮೊಬೈಲ್‌ವೊಂದನ್ನು ಕಳ್ಳತನ ಮಾಡಿಕೊಂಡು ಬಂದಿದ್ದ. ಈ ದೃಶ್ಯವನ್ನು ಅಬ್ದುಲ್ ಮಲೀಕ್ ಮತ್ತು ಜೈನುಲ್ ಸಿಸಿಟಿವಿಯಲ್ಲಿ ಗಮನಿಸಿ ಮೊಬೈಲ್ ಹಿಂದಿರುಗಿಸುವಂತೆ ಮನೋಜ್‌ಗೆ ತಾಕೀತು ಮಾಡಿದ್ದರು.
ಅದಾದ ನಂತರ, ಮೊಬೈಲ್ ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಇವರ ನಡುವೆ ಜಗಳ ನಡೆದಿದೆ. ಅಬ್ದುಲ್ ಮಲೀಕ್ ಮೊಬೈಲ್ ಮರಳಿಸುವಂತೆ ಕೇಳಿದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.