LUCKNOW, ಫೆಬ್ರವರಿ 25 -- ಪ್ರಪಂಚದಲ್ಲಿ ಕಳ್ಳತನಕ್ಕಾಗಿ ಕಳ್ಳರ ಗ್ಯಾಂಗ್ ಎಂತೆಂಥಾ ಖತರ್ನಾಕ್ ಐಡಿಯಾಗಳನ್ನೂ ಮಾಡಿದರೂ, ಒಂದಲ್ಲಾ ಒಂದು ದಿನ ಸಿಕ್ಕಿಬೀಳಲೇ ಬೇಕು. ಕಳ್ಳತನದ ಮೂಲಕ ಹಣ ಸಂಪಾದನೆಗೆ ಇಳಿಯುವ ಖದೀಮರು ವಿಜ್ಞಾನಿಗಳನ್ನು ಮೀರಿ ಬಗಬಗೆಯ ತಂತ್ರಗಳನ್ನು ಅನುಸರಿಸುತ್ತಾರೆ. ಉತ್ತರ ಪ್ರದೇಶದ ಲಖ್ನೋದಲ್ಲೂ ಇಂತಹದೇ ಒಂದು ಗ್ಯಾಂಗ್‌, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ. ಅದುವೇ 'ಕಛ್ರಾ ಗ್ಯಾಂಗ್‌. ಕಛ್ರಾ ಎಂದರೆ ಕಸ ಎಂದರ್ಥ. ಈ ಕಳ್ಳರ ಗುಂಪು ಕಸದಿಂದ ರಸ (cash from trash) ಎಂಬ ಮಾತಿಗೆ ಒಂದು ಹೊಸ ಅರ್ಥವನ್ನೇ ನೀಡಿತ್ತು. ಅದು ಈಗ ಪೊಲೀಸರ ಮುಂದೆ ಬಹಿರಂಗವಾಗಿದೆ.

ಈ 'ಕಸದ ಗ್ಯಾಂಗ್‌ʼನ ದರೋಡೆಯ ಕಾರ್ಯವಿಧಾನ ತಿಳಿದು ಲಕ್ನೋ ಪೊಲೀಸರಿಗೂ ಅಚ್ಚರಿಯಾಗಿತ್ತು. ಮೊದಲಿಗೆ ದರೋಡೆ ಮಾಡುವ ಮನೆಯನ್ನು ಗುರುತಿಸುತ್ತಿದ್ದರು. ಅಂತಹ ಮನೆಯನ್ನು ಅಂತಿಮಗೊಳಿಸಲು, ಇವರು ಬಳಸಿದ ಅಸ್ತ್ರವೇ ಕಸ. ಮೊದಲಿಗೆ, ರಾತ್ರಿ ವೇಳೆ ಮನೆಯ ಆವರಣದ ಮುಂದೆ ಅಥವಾ ಒಳಗೆ ಕಸವನ್ನು ಎಸೆಯುತ್ತಿದ್ದರು. ಮರುದಿನ ಬಂದು ಆ ಕಸ ಅಲ್ಲೇ ಇದೆಯೇ ಅ...