ಭಾರತ, ಏಪ್ರಿಲ್ 8 -- ಬೆಂಗಳೂರು: ಕರ್ನಾಟಕದಲ್ಲಿ ಮಾರ್ಚ್​ 1ರಿಂದ 20ರವರೆಗೆ ನಡೆದ 2024-25ನೇ ಸಾಲಿನ ದ್ವಿತೀಯ ಫಲಿತಾಂಶ ಇಂದು (ಮಂಗಳವಾರ) ಮಧ್ಯಾಹ್ನ 1.30ಕ್ಕೆ ಪ್ರಕಟವಾಗಲಿದೆ. ಬೆನ್ನಲ್ಲೇ ಮಂಡಳಿ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಮೊಬೈಲ್​ ಸಂಖ್ಯೆಗೂ ಫಲಿತಾಂಶ ರವಾನಿಸಲಾಗುತ್ತದೆ. ಫಲಿತಾಂಶ ವೀಕ್ಷಿಸಲು ಈ ವೆಬ್​ಸೈಟ್​ www.karresults.nic.in ಗೆ ಭೇಟಿ ನೀಡಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ದಾಖಲಿಸಿ ಫಲಿತಾಂಶ ವೀಕ್ಷಿಸಬಹುದು. 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹಾಗಾದರೆ ಕಳೆದ ಮೂರು ವರ್ಷಗಳ ಫಲಿತಾಂಶ ಹೇಗಿತ್ತು? ಯಾವ ಜಿಲ್ಲೆಗಳು ಮೊದಲು ಮೂರು ಮತ್ತು ಕೊನೆಯ ಮೂರು ಸ್ಥಾನಗಳನ್ನು ಪಡೆದಿದ್ದವು? ಇಲ್ಲಿದೆ ವಿವರ.

2024ಕ್ಕೆ ಹೋಲಿಸಿದರೆ ಈ ಬಾರಿ ಎರಡು ದಿನ ಮೊದಲೇ ಫಲಿತಾಂಶ ಪ್ರಕಟವಾಗುತ್ತಿದೆ. ಕಳೆದ ವರ್ಷ ಏಪ್ರಿಲ್‌ 10ರಂದು ಫಲಿತಾಂಶ ಪ್ರಕಟಗೊಂಡಿತ್ತು. ಈ ಬಾರಿ ಎರಡು ದಿನ ಮುಂಚಿತವಾಗಿ ರಿಸಲ್ಟ್ ಘೋಷಿಸಲಾಗುತ್ತಿದೆ. ಕಳೆದ ಬಾರಿ ರ...