ಭಾರತ, ಏಪ್ರಿಲ್ 8 -- 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಏಪ್ರಿಲ್ 8) ಮಧ್ಯಾಹ್ನ 1.30ಕ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ. ಇದಾದ ಬಳಿಕ ಮಂಡಳಿ ವೆಬ್​ಸೈಟ್​ನಲ್ಲಿ ಫಲಿತಾಂಶ ಅಪ್​ಡೇಟ್ ಮಾಡಲಾಗುತ್ತದೆ. ಈ ಸಲ ಯಾರು ಟಾಪರ್​ ಆಗುತ್ತಾರೆ, ಯಾವ ಜಿಲ್ಲೆ ಪ್ರಥಮ ಸ್ಥಾನ ಪಡೆಯುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಇದಕ್ಕೂ ಮುನ್ನ ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದ ವಿದ್ಯಾರ್ಥಿಗಳು ಯಾರು? ಇಲ್ಲಿದೆ ವಿವರ.

2024ರಲ್ಲಿ ಬೆಂಗಳೂರಿನ ಮೇಧಾ ಡಿ ಮತ್ತು ವಿಜಯಪುರದ ವೇದಾಂತ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಜಂಟಿ ಮೊದಲ ಸ್ಥಾನ ಪಡೆದಿದ್ದರು. ಇಬ್ಬರೂ ಸಹ 596 ಅಂಕ ಗಳಿಸಿದ್ದರು. ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಜಯನಗರದ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ಮೇಧಾ 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಎಸ್‌.ಎಲ್.ದಿವಾಕರ್‌ ಹಾಗೂ ಸಹನಾ ದಿವಾಕರ್‌ ಅವರ ಪು...