ಭಾರತ, ಏಪ್ರಿಲ್ 8 -- ಐಪಿಎಲ್‌ 2025ರಲ್ಲಿ ಸಿಎಸ್‌ಕೆ ಆಟ ನಡೆಯುತ್ತಿಲ್ಲ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಯೆಲ್ಲೋ ಆರ್ಮಿ, ಆ ನಂತರ ಸತತ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿದೆ. ಈ ಎಲ್ಲಾ ಪಂದ್ಯಗಳಲ್ಲಿ ಚೇಸಿಂಗ್‌ ಮಾಡುವಾಗ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಪಂಜಾಬ್‌ ಕಿಂಗ್ಸ್‌ ವಿರುದ್ಧ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಅಬ್ಬರದ ಮುಂದೆ ಮಂಡಿಯೂರಿದ ಚೆನ್ನೈ ಸೂಪರ್‌ ಕಿಂಗ್ಸ್‌, 18 ರನ್‌ಗಳಿಂದ ಪಂದ್ಯ ಸೋತಿದೆ. ಅತ್ತ ಪಂಜಾಬ್‌ ಕಿಂಗ್ಸ್‌ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಮುಲ್ಲನ್‌ಪುರದಲ್ಲಿ ಆತಿಥೇಯ ಪಂಜಾಬ್‌ ತಂಡಕ್ಕೆ ಈ ಬಾರಿ ಮೊದಲ ಗೆಲುವು ಎನ್ನುವುದು ವಿಶೇಷ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಿಬಿಕೆಎಸ್‌, 6 ವಿಕೆಟ್‌ ಕಳೆದುಕೊಂಡು 219 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಚೆನ್ನೈ, 5 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ಆರಂಭದಿಂದಲೇ ವೇಗದ ಆಟಕ್ಕೆ...