ಭಾರತ, ಜುಲೈ 21 -- ಸಂಬಂಧ ಎಂದರೆ ಎರಡು ಜೋಡಿ ಜೀವಗಳ ಅನುಬಂಧ. ಒಮ್ಮೊಮೆ ಸಂಗಾತಿಗಳಿಬ್ಬರ ನಡುವೆ ಅದೆಷ್ಟೇ ಅನ್ಯೋನ್ಯತೆ ಇದ್ದರೂ ವಿರಸ ಮೂಡುವುದು ಸಹಜ. ಆದರೆ ಈ ಕೋಪ, ತಾಪ ನಿರಂತರವಾಗಿ ಅಂತ್ಯವಿಲ್ಲದೇ ಸಾಗಿದಾಗ ಸಂಬಂಧಕ್ಕೆ ಅಂತ್ಯ ಹಾಡಬೇಕು ಎಂಬ ಭಾವ ಮನಸ್ಸಿನಲ್ಲೇ ಮೂಡುತ್ತದೆ. ಸಂಬಂಧದ ಬಿರುಕು ಕೆಲವೊಮ್ಮೆ ಖಿನ್ನತೆಗೂ ಕಾರಣವಾಗಬಹುದು. ಇದನ್ನ ಆಂಗ್ಲ ಭಾಷೆಯಲ್ಲಿ ʼರಿಲೇಷನ್‌ಶಿಪ್‌ ಡಿಪ್ರೆಷನ್‌ʼ ಎನ್ನುತ್ತಾರೆ. ಇದರಿಂದ ಸಂಗಾತಿಯಲ್ಲಿ ಒಂಟಿತನದ ಭಾವ ಕಾಡಬಹುದು.

ಸಂಬಂಧದಲ್ಲಿ ಒಬ್ಬರಿಗೊಬ್ಬರು ಗಮನ ಹರಿಸದೇ ಇದ್ದಾಗ, ಎಲ್ಲಾ ಸಮಯದಲ್ಲೂ ಕಿರಿಕಿರಿ, ಒಂಟಿತನ ಅನುಭವಿಸಿದಾಗ, ಸಂಬಂಧದಲ್ಲಿದ್ದೂ ಸಂಗಾತಿಯಿಂದ ಪ್ರೀತಿ ಸಿಗದೇ ಇದ್ದಾಗ ರಿಲೇಷನ್‌ ಡಿಪ್ರೆಷನ್‌ ಕಾಡಬಹುದು. ಇದರಿಂದ ಸಂಬಂಧವೇ ಬೇಡ ಎನ್ನಿಸುವ ಸ್ಥಿತಿ ಕೂಡ ಉದ್ಭವಿಸಬಹುದು. ಇಂತಹ ಖಿನ್ನತೆಯಿಂದ ಹೊರ ಬರುವುದು ಅಸಾಧ್ಯವೆಂದು ತೋರಿದರೂ ಕೂಡ ಇದನ್ನು ಸರಿಪಡಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಂಡು ಹೋಗಲು ಕೆಲವು ಉಪಾಯಗಳಿವೆ.

ಮೆಡಿಕಲ್‌ ನ್ಯೂಸ್‌ಟುಡೆಯಲ್ಲಿ ಪ...