Mumbai, ಮೇ 20 -- ಮುಂಬೈ: ಕಲ್ಯಾಣ್ ಜ್ಯುವೆಲ್ಲರ್ಸ್‌ನ ಲೈಫ್‌ಸ್ಟೈಲ್ ಆಭರಣ ಬ್ರ್ಯಾಂಡ್ ಆಗಿರುವ ಕ್ಯಾಂಡೆರ್ (Candere), ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ. ಕ್ಯಾಂಡರ್ ಬ್ರ್ಯಾಂಡ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಸಂಸ್ಥೆಯ ಕಾರ್ಯತಂತ್ರಕ್ಕೆ ಅನುಗುಣವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ಅವರೊಂದಿಗಿನ ಪಾಲುದಾರಿಕೆಯು ಹೊಸ ಗ್ರಾಹಕ ಸಮೂಹಕ್ಕೆ ನೂತನ ಮತ್ತು ಆಕರ್ಷಕ ವಿನ್ಯಾಸದ ಆಭರಣವನ್ನು ಒದಗಿಸುವ ಕ್ಯಾಂಡೆರ್‌ನ ಬದ್ಧತೆಗೆ ಪೂರಕವಾಗಿದ್ದು, ಪ್ರತ್ಯೇಕತೆಯನ್ನು ಒದಗಿಸುವುದು, ಅರ್ಥಪೂರ್ಣ ಉಡುಗೊರೆ ಮತ್ತು ಪ್ರತಿದಿನದ ಸ್ವ-ಅಭಿವ್ಯಕ್ತಿಯನ್ನು ಇದು ಒದಗಿಸಲಿದೆ.

ಜಾಗತಿಕ ಆಕರ್ಷಣೆ ಮತ್ತು ಮೋಡಿ ಮಾಡುವ ವ್ಯಕ್ತಿತ್ವ ಹೊಂದಿರುವ ನಟ ಶಾರುಖ್ ಖಾನ್ ಅವರ ವ್ಯಕ್ತಿತ್ವ ಕ್ಯಾಂಡೆರ್‌ನ ದೃಷ್ಟಿಕೋನಕ್ಕೆ ಸಮಪರ್ಕವಾಗಿ ಹೊಂದಿಕೆಯಾಗುತ್ತದೆ. ದೇಶದಲ್ಲಿನ ಎಲ್ಲ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವ ಮತ್ತು ಜನಪ್ರಿಯತೆ ಗಳಿಸಿಕೊಂಡಿರುವ ಶಾರುಖ...