Bengaluru, ಏಪ್ರಿಲ್ 20 -- ಅರ್ಥ: ಪ್ರಿಯ ಅರ್ಜುನ, ಕಾಮ್ಯಕರ್ಮದ ಮತ್ತು ಊಹಾತ್ಮಕ ಚಿಂತನೆಗಳ ಕಶ್ಮಲದಿಂದ ಮುಕ್ತರಾಗಿ ಯಾರು ನನ್ನ ಪರಿಶುದ್ಧ ಭಕ್ತಿಸೇವೆಯಲ್ಲಿ ತೊಡಗಿರುವನೋ, ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನ್ನನ್ನು ತನ್ನ ಬದುಕಿನ ಪರಮ ಗುರಿಯನ್ನಾಗಿ ಮಾಡಿಕೊಳ್ಳುವನೋ ಮತ್ತು ಎಲ್ಲ ಜೀವಿಗಳ ಮಿತ್ರನೋ ಅವನು ನಿಶ್ಚಯವಾಗಿಯೂ ನನ್ನಲ್ಲಿಗೆ ಬರುವನು.

ಭಾವಾರ್ಥ: ದೇವೋತ್ತಮ ಪರುಷರಲ್ಲಿ ಪರಮೋಚ್ಛ ಭಗವಂತನು ಆಧ್ಯಾತ್ಮಿಕ ಗಗನದ ಕೃಷ್ಣಲೋಕದಲ್ಲಿರುತ್ತಾನೆ. ಯಾರಾದರೂ ಅವನ ಬಳಿ ಸಾಗಲು ಬಯಸಿದರೆ ಮತ್ತು ಪರಮ ಪುರುಷನಾದ ಕೃಷ್ಣನೊಂದಿಗೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಲು ಬಯಸಿದರೆ, ಭಗವಂತನೇ ಇಲ್ಲಿ ಹೇಳಿರುವಂತೆ ಈ ಸೂತ್ರವನ್ನು ಅನುಸರಿಸಬೇಕು. ಆದ್ದರಿಂದ ಈ ಶ್ಲೋಕವನ್ನು ಭಗವದ್ಗೀತೆಯ ಸಾರವೆಂದು ಪರಿಗಣಿಸುತ್ತಾರೆ. ಬದ್ಧಜೀವಿಗಳು ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಐಹಿಕ ಜಗತ್ತಿನಲ್ಲಿ ಮುಳುಗಿರುತ್ತಾರೆ. ಅವರಿಗೆ ನಿಜವಾದ ಆಧ್ಯಾತ್ಮಿಕ ಬದುಕು ತಿಳಿಯದು.

ಇವರಿಗಾಗಿಯೇ ಇರುವ ಗ್ರಂಥ ಭಗವದ್ಗೀತೆ. ಮನುಷ್ಯನು ತನ್ನ ಆ...