Bengaluru, ಮಾರ್ಚ್ 31 -- ಪಿಯುಸಿ ಮುಗಿಯಿತು ಮುಂದೇನು ಎಂದು ಯೋಚಿಸುತ್ತಿರಬಹುದು. ಕೆಲವು ವಿದ್ಯಾರ್ಥಿಗಳಿಗೆ ತಾವು ಯಾವ ಕೋರ್ಸ್ ಮಾಡಬೇಕೆಂದು ತಿಳಿದಿರುವುದಿಲ್ಲ. ಪಿಯುಸಿ ಪರೀಕ್ಷೆಗಳು ಮುಗಿದಿವೆ, ಫಲಿತಾಂಶ ಬರಬೇಕಷ್ಟೇ. ಹಾಗಂತ ಫಲಿತಾಂಶ ಬರುವವರೆಗೆ ಕಾಯುವುದಲ್ಲ. ಈಗಲೇ ಮುಂದೇನು ಎಂಬ ಬಗ್ಗೆ ಯೋಚಿಸುವುದು ಬಹಳ ಮುಖ್ಯ. ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಾಂಗ ಮಾಡಿದ್ದರೆ, 12 ನೇ ತರಗತಿಯ ನಂತರ ಆಯ್ಕೆ ಮಾಡಲು ಉತ್ತಮ ಕೋರ್ಸ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಪಿಯುಸಿ ನಂತರ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ವೃತ್ತಿ ಅವಕಾಶಗಳು ಲಭ್ಯವಿದೆ. 12ನೇ ತರಗತಿಯ ನಂತರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬರುವ ಮೊದಲ ಸಂದೇಹವೆಂದರೆ ಮುಂದೆ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಬೇಕು ಎಂಬುದು. ಹೆಚ್ಚಿನ ವಿದ್ಯಾರ್ಥಿಗಳು ಹೆಚ್ಚಿನ ಸಂಬಳದ ಕೋರ್ಸ್‌ಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಅಧ್ಯಯನ ಮಾಡಬೇಕು ಎಂದು ಅಂದುಕೊಂಡಿದ್ದಾರೆ. ಇಲ್ಲ, ಕಲಾ ವಿಭಾಗದಲ್ಲೂ ವೃತ್ತಿ ಜೀವನ ಉತ್ತುಂಗಕ್ಕೆ ಕೊಂಡೊಯ್ಯುವ ವಿವಿಧ ಕೋ...