ಭಾರತ, ಜೂನ್ 5 -- 'ಕಲರ್ಸ್‌ ಕನ್ನಡ'ದ ಕಾರ್ಯಕ್ರಮ 'ದಶಕದ ಮಹೋತ್ಸವ'ದಲ್ಲಿ ಮನರಂಜನೆಯು ಮುಗಿಲು ಮುಟ್ಟಿತು. ಇದೇ ಶನಿವಾರ ಮತ್ತು ಭಾನುವಾರ (ಜೂನ್ 7 ಮತ್ತು 8) 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಸಂಜೆ 7 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು ರಾತ್ರಿ 10:30 ರ ವರೆಗೆ ಕನ್ನಡದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಆರಂಭವಾದ 'ಈ ಟಿವಿ ಕನ್ನಡ' 'ಕಲರ್ಸ್‌ ಕನ್ನಡ'ವಾಗಿ ಮಾರ್ಪಾಡುಗೊಂಡು ಇಂದಿಗೆ 10ನೇ ವರ್ಷದ ಮೈಲಿಗಲ್ಲನ್ನು ಮುಟ್ಟಿದೆ.

ಕಳೆದ ಒಂದು ದಶಕದಿಂದ ಕಲರ್ಸ್‌ ಕನ್ನಡ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ. ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಮಹೋನ್ನತ ಪರಂಪರೆಯನ್ನು ಸಂಭ್ರಮಿಸುವ ಕಾರ್ಯಕ್ರಮವೇ 'ದಶಕದ ಮಹೋತ್ಸವ'. 'ಅದೇ ಬೇರು, ಹೊಸ ಚಿಗುರು' ಹೆಸರಿನಲ್ಲಿ ಹೊಸ ಆರಂಭಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಆಳವಾಗಿ ಬೇರೂರಿರುವ ಪರಂಪರೆಯನ್ನು ಗೌರವಿಸುವ ಕಾರ್ಯಕ್...