Bengaluru, ಫೆಬ್ರವರಿ 24 -- Bharjari bachelors Season 2: ಕನ್ನಡ ಪ್ರಮುಖ ನಿರೂಪಕರಲ್ಲಿ ನಿರಂಜನ್‌ ದೇಶಪಾಂಡೆ ಸಹ ಒಬ್ಬರು. ರಂಗಭೂಮಿಯಲ್ಲಿ ಗುರುತಿಸಿಕೊಂಡು, ಕಿರುತೆರೆಯಲ್ಲಿಯೂ ನಟಿಸಿ, ಇದೀಗ ನಿರೂಪಕನಾಗಿ ಕನ್ನಡದ ಮನೆ ಮನಗಳನ್ನು ತಲುಪಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ತಮ್ಮ ನಿರೂಪಣೆ ಜರ್ನಿಯನ್ನು ಜೀ ಕನ್ನಡದಿಂದಲೇ ಆರಂಭಿಸಿದ್ದ ನಿರಂಜನ್‌, ಇತ್ತೀಚಿನ ಕೆಲ ವರ್ಷಗಳಿಂದ ಜೀ ಕನ್ನಡದ ಬದಲು ಕಲರ್ಸ್‌ ಕನ್ನಡದ ಆಜೀವ ಸದಸ್ಯನಂತಿದ್ದರು. ಇದೀಗ ಒಂದು ಬದಲಾವಣೆಯತ್ತ ಅವರು ಹೊರಳಿದ್ದಾರೆ. ಕಲರ್ಸ್‌ ಕನ್ನಡದ ಜತೆಗಿನ ಸುದೀರ್ಘ ಪಯಣಕ್ಕೆ ಬ್ರೇಕ್‌ ಹಾಕಿ, ತವರಿಗೆ ಮರಳಿದ್ದಾರೆ! ಅಂದರೆ, ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2 ಮೂಲಕ ಆಗಮಿಸಿದ್ದಾರೆ.

ನಿರಂಜನ್‌ ದೇಶಪಾಂಡೆ, ಕಲರ್ಸ್‌ ಕನ್ನಡದಲ್ಲಿನ ಹಲವು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದಾರೆ. ಮಾತಿನ ಮೂಲಕವೇ ಕಚಗುಳಿ ಇಡುತ್ತ, ಮಾತಿನಿಂದಲೇ ಎಲ್ಲರನ್ನು ಸೆಳೆಯುವ ಇದೇ ಮಾತುಗಾರ ಇದೀಗ ಜೀ ಕನ್ನಡಕ್ಕೆ ಆಗಮಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ರ ನಿರೂ...