ಭಾರತ, ಏಪ್ರಿಲ್ 2 -- ಲಕ್ಷ್ಮೀ ಬಾರಮ್ಮ, ಭಾಗಲಕ್ಷ್ಮೀ, ದೃಷ್ಟಿಬೊಟ್ಟು, ನಿನಗಾಗಿ, ರಾಮಾಚಾರಿ, ಕರಿಮಣಿ, ಭಾರ್ಗವಿ ಎಲ್‌ಎಲ್‌ಬಿಯಂತಹ ವಿಭಿನ್ನ ಕಥೆಗಳ ಧಾರಾವಾಹಿಗಳು ಪ್ರಸಾರವಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಪ್ರಸಾರಕ್ಕೆ ಸಿದ್ಧವಾಗಿದೆ. 'ನಂದಗೋಕುಲ' ಎನ್ನುವ ಹೊಸ ಧಾರಾವಾಹಿ ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಬಹುತಾರಾಗಣದ ಈ ಧಾರಾವಾಹಿಯನ್ನು ರಾಮಾಚಾರಿ, ದೃಷ್ಟಿಬೊಟ್ಟು, ನೂರುಜನ್ಮಕ್ಕೂ ಇಂತಹ ವಿಭಿನ್ನ ಕಥೆಯನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಶ್ರವಂತ್ ಅವರ ಜಾಹ್ನವಿ ಫಿಲ್ಮ್ ಎಂಫೈರ್ ಎನ್ನುವ ಹೊಸ ನಿರ್ಮಾಣ ಸಂಸ್ಥೆ ಈ ಹೊಸ ಧಾರಾವಾಹಿ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.
ಬಹು ತಾರಾಗಣದ ಈ ಧಾರಾವಾಹಿಯಲ್ಲಿ ಜೀ ಕನ್ನಡದ ಗಟ್ಟಿಮೇಳದ ಧಾರಾವಾಹಿ ವಿಕ್ರಾಂತ್ ಪಾತ್ರಧಾರಿ ಅಭಿ ದಾಸ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅರವಿಂದ್, ವಿಜಯಚಂದ್ರ, ಯಶವಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಕಲರ್ಸ್ ಕ...
Click here to read full article from source
To read the full article or to get the complete feed from this publication, please
Contact Us.