Bengaluru, ಏಪ್ರಿಲ್ 18 -- ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಬೇರೆ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂಬ ವದಂತಿ ಹರಡಿದ ಕೂಡಲೇ, ಧಾರವಾಡ ವಕೀಲರ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ವಿ.ಎಂ.ಶೀಲವಂತ್ ಅವರು ಈ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರಸಂಗ ಈ ದೇಶದ ಗಮನಸೆಳೆದಿದ್ದು, ಎಲ್ಲರ ಗಮನವೂ ಈಗ ಕರ್ನಾಟಕ ಹೈಕೋರ್ಟ್‌ ಕಡೆಗೆ ತಿರುಗಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಕೆ.ನಟರಾಜನ್, ಹೇಮಂತ್ ಚಂದನಗೌಡರ್ ಮತ್ತು ಸಂಜಯ್ ಗೌಡ ಅವರ ವರ್ಗಾವಣೆಯ ಸುದ್ದಿ ಧಾರವಾಡ ಪೀಠದ ವಕೀಲರ ಸಂಘದ ವಲಯದಲ್ಲಿ ಕಳವಳ ಮೂಡಿಸಿದೆ. ಹೀಗಾಗಿ, ನ್ಯಾಯಮೂರ್ತಿಗಳನ್ನು ಬೇರೆ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ವಿ.ಎಂ.ಶೀಲವಂತ್ ಭಾ...