ಭಾರತ, ಏಪ್ರಿಲ್ 21 -- ಹೈಕೋರ್ಟ್‌ ನ್ಯಾಯಮೂರ್ತಿಗಳ ವರ್ಗಾವಣೆ: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಕೆ.ನಟರಾಜನ್, ಹೇಮಂತ್ ಚಂದನಗೌಡರ್ ಮತ್ತು ಸಂಜಯ್ ಗೌಡ ಅವರ ವರ್ಗಾವಣೆಯ ಸುದ್ದಿ ನಿಜವಾಗಿದೆ. ಇತ್ತೀಚೆಗಷ್ಟೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ವಕೀಲರ ಸಂಘ ಈ ವರ್ಗಾವಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದು ಸುದ್ದಿಯಾಗಿತ್ತು. ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಆದ್ಯತೆ ನೀಡಿ ಈ ನ್ಯಾಯಮೂರ್ತಿಗಳನ್ನು ಕರ್ನಾಟಕ ಹೈಕೋರ್ಟ್‌ನಲ್ಲೇ ಮುಂದುವರಿಯಲು ಬಿಡಬೇಕು ಎಂದು ಸಂಘ ಆಗ್ರಹಿಸಿತ್ತು.

ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಏಪ್ರಿಲ್ 15 ಮತ್ತು ಏಪ್ರಿಲ್ 19 ರಂದು ಸಭೆ ಸೇರಿದ್ದು, ನ್ಯಾಯಾಂಗ, ಆಡಳಿತಾತ್ಮಕ ವ್ಯವಸ್ಥೆ ಗುಣಮಟ್ಟ ಬಲಪಡಿಸುವುದಕ್ಕಾಗಿ ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಕೊಲಿಜಿಯಂ ಹೇಳಿಕೆ ನೀಡಿದೆ.

ಇದರಂತೆ, ಕರ್ನಾಟಕ ಹೈಕೋರ್ಟ್‌ನ ನ್ಯಾ...