Bengaluru, ಮೇ 19 -- ಕರ್ನಾಟಕ ಹವಾಮಾನ ಮೇ 19: ಕರ್ನಾಟಕದಲ್ಲಿ ಇಂದು ಮಳೆಯ ವಾತಾವರಣ ಇದ್ದು, ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮೇ 22ರ ತನಕ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮೇ 18 ರಿಂದ 20ರ ತನಕ, ಕರಾವಳಿ ಜಿಲ್ಲೆ, ಮಲೆನಾಡು ಭಾಗದಲ್ಲಿ ಮೇ 20 ರಿಂದ 22 ರ ತನಕ ಅತಿ ಹೆಚ್ಚು ಮಳೆ (11.5 ಎಂಎಂನಿಂದ 204.5 ಎಂಎಂ) ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು (ಮೇ 19) ಚಿತ್ರದುರ್ಗ, ಹಾಸನ ಸೇರಿ 4 ಜಿಲ್ಲೆಗಳಲ್ಲಿ ಭಾರಿ ಮಳೆ, ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದ ವ್ಯಾಪ್ತಿಗೆ ಬರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು (ಮೇ 19) ಮಳೆಯ ಸಾಧ್ಯತೆ ಇರಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ತಾಪಮಾನ ಇಳಿಕ...