ಭಾರತ, ಮಾರ್ಚ್ 16 -- ಕರ್ನಾಟಕ ಹವಾಮಾನ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸುಡು ಬಿಸಿಲು ಹೆಚ್ಚಾಗುತ್ತಲೇ ಇದ್ದು, ಜನ ಹೈರಾಣವಾಗುತ್ತಿದ್ದಾರೆ. ವಿಶೇಷವಾಗಿ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಗದಗ, ವಿಜಯಪುರ, ರಾಯಚೂರು ಹಾಗೂ ಕಲಬುರ್ಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೈಸುಡುವ ಬಿಸಿಲಿದೆ. ಮಧ್ಯಾಹ್ನ 12 ರಿಂದ 3 ಗಂಟೆಯ ಸಮಯದಲ್ಲಿ ಭಾರಿ ಬಿಸಿಲಿನ ವಾತಾವರಣ ಇದೆ. ಪರಿಣಾಮವಾಗಿ ಜನರು ಮನೆಯಿಂದ ಹೊರಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು, ಹೈಡ್ರೇಟ್ ಆಗಿರಲು ಜನರು ನಾನಾ ರೀತಿಯ ಕಸರತ್ತುಗಳನ್ನು ಅನುಸರಿಸುತ್ತಿದ್ದಾರೆ. ಬಿಸಿಲಿನಿಂದ ಪಾರಾಗಲು ಕೆಲವೆಡೆ ಜನರು ತಂಪು ಪಾನೀಯಗಳು ಹಾಗೂ ಹಣ್ಣುಗಳ ಮೊರೆ ಹೋಗುತ್ತಿರುವುದು ಕಾಣಬಹುದು. ರಸ್ತೆಗಳ ಬದಿಯಲ್ಲಿರುವ ಕಬ್ಬಿನ ಹಾಲು, ಕಲ್ಲಂಗಡಿ ಹಾಗೂ ಹಣ್ಣುಗಳ ಜ್ಯೋಸ್ ಗಳನ್ನು ಸೇವಿಸುತ್ತಿರುವುದು ಬಿಸಿಲಿನ ತೀವ್ರತೆಗೆ ಸಾಕ್ಷಿಯಾಗಿದೆ.
ಕಳೆದ 24 ಗಂಟೆಗಳಲ್ಲಿನ ವಾತಾವರಣ ಕುರಿತು ಬೆಂಗಳೂರು ಹಮವಾನ ಕೇಂದ್ರ ನೀಡಿರುವ ವರದಿಯಂತೆ, ರಾಜ್ಯದ ಯಾವುದೇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.