ಭಾರತ, ಫೆಬ್ರವರಿ 27 -- Karnataka Weather Feb 27: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು (ಫೆ 27) ಉಷ್ಣದ ಅಲೆ (ಹೀಟ್ ವೇವ್) ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ. ನಿನ್ನೆ (ಫೆ 26) ಅಪರಾಹ್ನ ಬಿಡುಗಡೆ ಮಾಡಿದ ಹವಾಮಾನ ಮುನ್ಸೂಚನೆ ಪ್ರಕಾರ, ನಿನ್ನೆ ಮತ್ತು ಇಂದು ಗರಿಷ್ಠ ತಾಪಮಾನ ಹೆಚ್ಚಳವಾಗಲಿದ್ದು, ತೇವಾಂಶ ಶೇಕಡ 40-50 ನಡುವೆ ಕುಸಿಯಲಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಉಷ್ಣದ ಅಲೆಗಳು ಅನುಭವಕ್ಕೆ ಬರಲಿದೆ.
ಕರ್ನಾಟಕದಲ್ಲಿ ಇಂದು (ಫೆ 27) ವ್ಯಾಪಕವಾಗಿ ಒಣಹವೆ ಇರಲಿದೆ. ಒಂದೆರಡು ಕಡೆ ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ. ಇನ್ನುಳಿದಂತೆ ಕರಾವಳಿ ಕರ್ನಾಟಕದಲ್ಲಿ ಉಷ್ಣದ ಅಲೆ ಇಂದು ಕೂಡ ಇರಲಿದ್ದು, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ...
Click here to read full article from source
To read the full article or to get the complete feed from this publication, please
Contact Us.