ಭಾರತ, ಫೆಬ್ರವರಿ 25 -- Karnataka Weather: ಕರ್ನಾಟಕದ ಬಹುತೇಕ ಕಡೆಗಳಲ್ಲಿ ಸುಡು ಬಿಸಿಲು ಮುಂದುವರಿದಿದ್ದರೆ ಕರಾವಳಿಯ ಕೆಲವೊಂದು ಕಡೆಗಳಲ್ಲಿ ವರುಣ ಆಗಮನವಾಗಿದೆ. ಫೆಬ್ರವರಿ 24ರ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಗೇರೊಸೊಪ್ಪದಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ರಾಜ್ಯದಲ್ಲಿ ಒಣ ಹವೆ ಮುಂದುವರಿದಿದೆ. ಇಂದಿನ (ಫೆಬ್ರವರಿ 25, ಮಂಗಳವಾರ) ಹವಾಮಾನ ವರದಿಯನ್ನು ನೋಡುವುದಾದರೆ, ಬೆಂಗಳೂರು ಹವಾಮಾನ ಕೇಂದ್ರದ ಮಾಹಿತಿಯಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಮುಂಜಾನೆ ಮಂಜಿನ ವಾತಾವರಣ ನಿರ್ಮಾಣವಾಗಿದೆ. ಇದು ಕೆಲವೆಡೆ ವಾಹನ ಸಂಚಾರಕ್ಕೆ ಅಡ್ಡಿ ಸೇರಿದಂತೆ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಅಲ್ಪ ಪ್ರಮಾಣದಲ್ಲಿ ಅಡ್ಡಿ ಮಾಡಿದಂತಿದೆ. ಚಳಿಯು ಕೂಡ ಇದೆ. ಬೆಳಗ್ಗೆ 8 ಗಂಟೆಯ ನಂತರ ಮಂಜು ಕಡಿಮೆಯಾಗಿ ಬಿಸಿಲು ಹೆಚ್ಚಾಗಲಿದೆ.

ಕಳೆದ 24 ಗಂಟೆಗಳಲ್ಲಿನ ಹವಾಮಾನ ವರದಿಯ ಪ್ರಕಾರ, ರಾಜ್ಯದ ಕೆಲವೆಡೆ ಬಿಸಿ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಆಗುಂಬೆಯಲ್ಲಿ ಗರಿಷ್ಠ ತಾಪಮಾನದಲ್ಲಿ 2.9 ಡಿಗ್ರಿಯಷ್ಟು ಗಮನಾರ್ಹ ಏರಿಕೆಯಾಗಿದೆ. ...