Bengaluru,ಬೆಂಗಳೂರು, ಏಪ್ರಿಲ್ 29 -- ಬೆಂಗಳೂರು: ರಾಜ್ಯದ ಬೀದರ್‌, ಬಾಗಲಕೋಟೆ, ಹಾವೇರಿ, ಕೋಲಾರ, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 29) ರಣಬಿಸಿಲು, ಬಿಸಿಗಾಳಿ ಮತ್ತು ಶಾಖದ ಅಲೆಗಳ ತೀವ್ರತೆ ಜನರನ್ನು ಕಾಡಲಿದೆ. ಈ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆರೆಂಜ್ ಅಲರ್ಟ್‌ ನೀಡಿದೆ. ಇದೇ ವೇಳೆ. ಹವಾಮಾನ ಮುನ್ಸೂಚನಾ ಇಲಾಖೆ 16 ಜಿಲ್ಲೆಗಳಲ್ಲಿ ಹಳದಿ ಅಲರ್ಟ್‌ ಘೋಷಿಸಿದೆ.

ಬೆಂಗಳೂರು ಸುತ್ತಮುತ್ತ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಶಿಯಸ್‌ ದಾಟಬಹುದು. ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಶಿಯಸ್ ದಾಟಬಹುದು ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಅದೇ ರೀತಿ ರಾಜ್ಯದ ಎಲ್ಲೆಡೆ ಒಣಹವೆ ಇರಲಿದ್ದು, ಗರಿಷ್ಠ ತಾಪಮಾನ ಹೆಚ್ಚಳ ಉಂಟಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಇಲಾಖೆಯ ವರದಿ ನೀಡಿದೆ. ಕರಾವಳಿಯ ಜಿಲ್ಲೆಗಳಲ್ಲಿ ಅಂದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡಗಳಲ್ಲಿ ಸುಡುಬಿಸಿಲಿನ ಜೊತೆಗೆ ಆರ್ದ್ರತೆಯೂ ಇರಲಿದ್ದು, ಶುಷ್ಕತೆಯೊಂದಿಗ...