Bengaluru,ಬೆಂಗಳೂರು, ಏಪ್ರಿಲ್ 27 -- ಬೆಂಗಳೂರು: ಕರ್ನಾಟಕದ ಬೀದರ್‌, ಮೈಸೂರು, ಬಾಗಲಕೋಟೆ, ಮಂಡ್ಯ, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 27) ರಣಬಿಸಿಲು, ಬಿಸಿಗಾಳಿ ಮತ್ತು ಶಾಖದ ಅಲೆಗಳು ಉಂಟಾಗಬಹುದು. ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂಜಾನೆ/ ಬೆಳಗ್ಗೆ ಮೋಡಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಶಿಯಸ್‌ ದಾಟಬಹುದು ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉಳಿದಂತೆ ಎಲ್ಲೆಡೆ ಒಣಹವೆ ಇರಲಿದ್ದು, ಗರಿಷ್ಠ ತಾಪಮಾನ ಹೆಚ್ಚಳ ಅನುಭವ ಉಂಟಾಗಲಿದೆ. ಕರಾವಳಿಯ ಜಿಲ್ಲೆಗಳಲ್ಲಿ ಸುಡುಬಿಸಿಲಿನ ಜೊತೆಗೆ ಆರ್ದ್ರತೆಯೂ ಇರಲಿದ್ದು, ಶುಷ್ಕತೆಯೊಂದಿಗೆ ಸುಡುಬಿಸಿಲು ಕಾಡಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.

ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ಪ್ರಕಾರ, ಏಪ್ರಿಲ್ 28ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಆದಾಗ್ಯೂ, ಏಪ್ರಿಲ್ 30 ರ ತನಕ ಗರಿಷ್ಠ ಉಷ್ಣಾಂಶ 2 ರಿಂದ 2...