ಭಾರತ, ಜನವರಿ 27 -- ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಪರೀತ ಥಂಡಿ, ಶೀತ ಗಾಳಿ ತಗ್ಗಿ ಬಿಸಿಲಿನ ಪ್ರಮಾಣ ಏರುತ್ತಿರುವುದರ ನಡುವೆ ಭಾರತೀಯ ಹವಾಮಾನ ಇಲಾಖೆ, ಜನವರಿ 30ರಿಂದ 3 ದಿನಗಳ ಕಾಲ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಅಲ್ಲದೆ, 29ರ ತನಕ ಒಣಹವೆ ಮುಂದುವರೆಯಲಿದೆ ಎಂದು ಸೂಚಿಸಿದೆ. ಬೇಸಿಗೆ ಆರಂಭಕ್ಕೆ ಇನ್ನೂ ಸಮಯವಿದ್ದರೂ ಅದಾಗಲೇ 20 ಜಿಲ್ಲೆಗಳಲ್ಲಿ ಸಾಧಾರಣ ಅಥವಾ ವ್ಯಾಪಕ ಮಳೆಯಾಗಬಹುದು ಎಂದು ಸೂಚಿಸಿದೆ.

ಇಂದು (ಜ.27) ಸೇರಿ ಜನವರಿ 29ರವರೆಗೂ ರಾಜ್ಯಾದ್ಯಂತ ಒಣ ಹವೆ ಮತ್ತು ಬೆಳಿಗ್ಗೆ ಮತ್ತು ಸಂಜೆ ವೇಳೆ ದಟ್ಟವಾದ ಮಂಜು ಮತ್ತು ಇಬ್ಬನಿ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಆದರೆ ಜನವರಿ 30ರಿಂದ ಫೆಬ್ರವರಿ 1 ತನಕ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. 7 ದಿನಗಳ ಕಾಲ ಮುನ್ಸೂಚನೆ ನೀಡುವ ಹವಾಮಾನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಿಲ್ಲೆ ಮಳೆಯಾಗಲಿದೆ? ಇಲ್ಲಿದೆ ನೋಡಿ ವಿವರ.

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂ...