ಭಾರತ, ಮಾರ್ಚ್ 24 -- ಬೆಂಗಳೂರು: ಬೇಸಿಗೆಯಲ್ಲಿ ಮಳೆ ಬರುವುದು ಎಂದರೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಎನ್ನಿಸುವುದು ಸುಳ್ಳಲ್ಲ. ಯಾಕೆಂದರೆ ಅತಿಯಾದ ಸೂರ್ಯನ ಶಾಖವು ಭೂಮಿಯನ್ನು ಕಾದ ಹೆಂಚಿನಂತೆ ಮಾಡಿರುತ್ತದೆ. ಬರಿಗಾಲಿನಲ್ಲಿ ನೆಲದ ಮೇಲೆ ಕಾಲಿಡುವುದು ಕೂಡ ಕಷ್ಟವಾಗಿರುವ ಸಂದರ್ಭದಲ್ಲಿ ಮಳೆ ಬಂದರೆ ಅದರ ಖುಷಿಯೇ ಬೇರೆ. ಇದೀಗ ಮೂರು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಸುರಿಯುವ ಮುನ್ಸೂಚನೆ ನೀಡಿದೆ ಭಾರತೀಯ ಹವಾಮಾನ ಇಲಾಖೆ.

ಇಂದು ರಾಜ್ಯದ 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ಜೊತೆಗೆ ಗುಡುಗು, ಮಿಂಚು ಹಾಗೂ ಗಾಳಿಯೂ ಇರಲಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಜೋರಾದ ಗಾಳಿ ಬೀಸಲಿದೆ. ಗಾಳಿಯ ತೀವ್ರತೆಯು ಹೆಚ್ಚಿರುವ ಕಾರಣ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಮಾರ್ಚ್ 22 ರಂದು ಸಂಜೆ ಬೆಂಗಳೂರಿನಲ್ಲಿ ಸುರಿದ ಗಾಳಿ-ಮಳೆಗೆ ಹಲವು ರೀತಿಯ ಅವಾಂತರಗಳಾಗಿದ್ದು, ಪುಟ್ಟ ಬಾಲಕಿ ಬಲಿಯಾಗಿದ್ದಾಳೆ. ಇಂದು ಯಾವೆಲ್ಲಾ ಜಿಲ್ಲ...