ಭಾರತ, ಏಪ್ರಿಲ್ 19 -- ಕರ್ನಾಟಕ ಹವಾಮಾನ: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಬಿಸಿಲ ಬೇಗೆಗೆ ಬಳಲಿ ಬೆಂಡಾಗಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ. ಕೆಲ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ವಾತಾವರಣದಲ್ಲಿ ಬಾರಿ ಬದಲಾವಣೆಯಾಗಿದೆ. ಸತತ ಮಳೆಯಿಂದಾಗಿ ಉಷ್ಣಾಂಶದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಸುಡು ಬಿಸಿಲಿಗೆ ಕೆಂಡದಂತಾಗಿದ್ದ ಭೂಮಿ ತಂಪಾಗಿದೆ. ಇದು ರೈತರ ಪಾಲಿಗೆ ವರದಾನವಾಗಿದೆ. ಇಂದು (ಏಪ್ರಿಲ್ 19, ಶನಿವಾರ) ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಏಲ್ಲೆಲ್ಲಿ ಮಳೆಯಾಗುತ್ತೆ ಎಂಬ ಜಿಲ್ಲಾವಾರು ವರದಿ ಹಾಗೂ ವಾತಾವರಣದಲ್ಲಿ ಬದಲಾವಣೆಯ ವರದಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು ಹವಾಮಾನ ಕೇಂದ್ರದ ವರದಿಯ ಪ್ರಕಾರ, ನಿನ್ನೆ (ಏಪ್ರಿಲ್ 18, ಶುಕ್ರವಾರ) ಕರ್ನಾಟಕದ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿ...