ಭಾರತ, ಫೆಬ್ರವರಿ 6 -- Karnataka Weather: ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಸರಿಯಾಗಿ ಅನುಭವಕ್ಕೆ ಬರುತ್ತಿದ್ದು, ಸದ್ಯ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಇಂದು (ಫೆ 6) ಕೂಡ ಬೆಂಗಳೂರಿಗರಿಗೆ ಸುಡು ಬಿಸಿಲಿನ ಅನುಭವ ಅನಿವಾರ್ಯ. ಇದೇ ವೇಳೆ, ದಾವಣಗೆರೆ, ಮೈಸೂರು ಮುಂತಾದೆಡೆ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಶಿಯಸ್‌ಗೆ ಇಳಿದು ಚಳಿಯ ಅನುಭವ ಕೊಟ್ಟಿದೆ. ಭಾರತದ ಹವಾಮಾನ ಇಲಾಖೆಯ ಪ್ರಕಾರ ಕರ್ನಾಟಕದ ಉದ್ದಗಲಕ್ಕೂ ಒಣಹವೆ ಇರಲಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆ ದಟ್ಟ ಮಂಜು, ಇನ್ನು ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಂಜು ಕಾಡಬಹುದು. ಬಹುಶಃ ಮುಂದಿನ ವಾರದ ತನಕವೂ ಬೆಂಗಳೂರಿಗರನ್ನು ಸುಡು ಬಿಸಿಲು ಕಾಡಲಿದೆ.

ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ಕಡೆ ಇಂದು (ಫೆ 6) ಮುಂಜಾನೆ ಮಂಜು ಕಾಡಲಿದೆ. ಉಳಿದಂತೆ ಹಗಲು ಹೊತ್ತು ಸುಡು ಬಿಸಿಲು ಅನುಭವಕ್ಕೆ ಬರಲಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಗಳಲ್ಲಿ ...