ಭಾರತ, ಏಪ್ರಿಲ್ 25 -- ಕರ್ನಾಟಕ ಹವಾಮಾನ ಗಮನಿಸಿದರೆ 10 ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 11 ಜಿಲ್ಲೆಗಳಲ್ಲಿ ಸುಡು ಬಿಸಿಲು ಚರ್ಮ ಸುಡುತ್ತಿರುವುದಲ್ಲದೆ, ಗಂಟಲು ಆರುವಂತೆ ಮಾಡತೊಡಗಿದೆ. ಈ ಪೈಕಿ ಬೀದರ್‌ನಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಗಡಿದಾಟಿದ್ದು, ಜನರು ಕಂಗೆಡುವಂತಾಗಿದೆ.

ಬೀದರ್ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ಗೂ ಮೇಲೆ ಏರಿಕೆಯಾಗಿದೆ. ಬೀದರ್‌ನ ಗರಿಷ್ಠ ತಾಪಮಾನ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರ ನಡುವೆ ದಾಖಲಾದ ಮಟ್ಟಿಗೆ 45.8 ಡಿಗ್ರಿ ಸೆಲ್ಶಿಯಸ್‌ ಆಗಿತ್ತು. ಇದು ಇನ್ನೂ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಕಲಬುರಗಿಯಲ್ಲಿ ಕೂಡ ಸುಡುಬಿಸಿಲಿನ ಅನುಭವ. ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆ ನಡುವೆ ಇಲ್ಲಿ ದಾಖಲಾದ ಗರಿಷ್ಠ ತಾಪಮಾನ 43.9 ಡಿಗ್ರಿ ಸೆಲ್ಶಿಯಸ್. ಈ ಸುಡು ಬಿಸಿಲಿನ ಅನುಭವ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಯಚೂರು - ಬಿಸ...