ಭಾರತ, ಏಪ್ರಿಲ್ 14 -- Karnataka Weather: ಕಳೆದ ಮೂರ್ನ್ಕಾಲು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಕಾದು ಬೆಂಡಾದ ಭೂಮಿ ಕೊಂಚ ತಂಪಾಗಿದೆ. ಬಿಸಿಲಿನ ಝಳದಿಂದ ಕಂಗೆಟ್ಟ ಜನರಿಗೆ ಮಳೆ ಖುಷಿ ನೀಡಿದೆ. ರಾಜ್ಯದಲ್ಲಿ ಇಂದಿನಿಂದ ಮೂರ್ನ್ಕಾಲು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.

ಕೆಲವಡೆ ಈಗಾಗಲೇ ಕುಡಿಯುವ ನೀರಿಗೂ ತೊಂದರೆ ಉಂಟಾಗಿದ್ದು, ನಿರಂತರವಾಗಿ ಕೆಲವು ದಿನಗಳ ಕಾಲ ಮಳೆ ಬಂದರೆ ನೀರಿನ ಕೊರತೆ ನೀಗಬಹುದು ಎಂಬ ಆಶಾಕಿರಣ ಉಂಟಾಗಿದೆ. ಆದರೆ ಮಳೆ ಜೊತೆ ಗುಡುಗು ಹಾಗೂ ಸಿಡಿಲು ಕೂಡ ಜಾಸ್ತಿ ಇರಲಿದ್ದು ರಾಜ್ಯದ ಜನತೆ ಎಚ್ಚರ ವಹಿಸಬೇಕಾಗಿದೆ. ಇಂದು (ಏಪ್ರಿಲ್ 14) ಮಳೆಯೊಂದಿಗೆ ಪ್ರಬಲ ಗಾಳಿಯೂ ಬೀಸಲಿದೆ. ನೀವಿರುವ ಜಿಲ್ಲೆಯಲ್ಲೂ ಇವತ್ತು ಮಳೆ ಬರುತ್ತಾ ನೋಡಿ.

ಕರಾವಳಿ ಜಿಲ್ಲೆಗಳಾ...