ಭಾರತ, ಮಾರ್ಚ್ 26 -- ಬೆಂಗಳೂರು: ಕಳೆದ ಮೂರುಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇಂದು (ಮಾರ್ಚ್ 26) ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಕಡೆ ಒಣಹವೆ ಮುಂದುವರಿಯಲಿದೆ. ಇನ್ನೂ 3 ದಿನಗಳ ಕಾಲ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಈಗಾಗಲೇ ಬಿಸಿಲಿನಿಂದ ಕಂಗೆಟ್ಟ ರಾಜ್ಯದ ಜನತೆಗೆ ಮಳೆ ಬಾರದೇ ಇರುವುದು ಸಮಸ್ಯೆ ತಂದೊಡ್ಡಬಹುದು. ಅತಿಯಾದ ಬಿಸಿಲು, ಸೆಖೆಯ ಜೊತೆ ಅಲ್ಲಲ್ಲಿ ನೀರಿನ ಕೊರತೆಯು ಎದುರಾಗಿದೆ. ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವ ಕಾರಣ ಭೂಮಿ ಕಾದ ಹೆಂಚಿನಂತಾಗಿದೆ. ಹಾಗಾಗಿ ಮಳೆ ಬಾರದೇ ಇದ್ದರೆ ಸಮಸ್ಯೆ ಇನ್ನಷ್ಟು ಮುಂದುವರಿಯಬಹುದು. ಆದರೆ ಮಾರ್ಚ್ 30ರ ಯುಗಾದಿ ಹಬ್ಬದ ದಿನದಂದು ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ವಿವರ ಇಲ್ಲಿದೆ ಗಮನಿಸಿ.

ಕರಾವಳಿ ಜಿಲ್ಲೆಗಳಾದ ಉಡ...