Bangalore, ಫೆಬ್ರವರಿ 13 -- Karnataka Weather Updates: ಕರ್ನಾಟಕದ ಹಲವು ನಗರಗಳಲ್ಲಿ ಬೆಳಗಿನ ಸಮಯದಲ್ಲಿ ಭಾರೀ ಪ್ರಮಾಣದ ಚಳಿ. ಮಧ್ಯಾಹ್ನದ ಹೊತ್ತಿಗೆ ಬಿರು ಬಿಸಿಲಿನ ವಾತಾವರಣ.ಕರ್ನಾಟಕದ ಹಲವು ನಗರಗಳಲ್ಲಿ ಗುರುವಾರವೂ ಚಳಿಯ ಅನುಭವವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಅಲ್ಲದೇ ಹಾಸನ, ಚಿಂತಾಮಣಿ, ಮಂಡ್ಯ, ಮೈಸೂರಿನಲ್ಲೂ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದು ಚಳಿಯ ಅನುಭವ ದಟ್ಟವಾಗಿತ್ತು. ಇನ್ನೇನು ಶಿವರಾತ್ರಿ ಆಗಮಿಸುತ್ತಿರುವುದರಿಂದ ಚಳಿಯ ಪ್ರಮಾಣದಲ್ಲಿ ಏರಿಳಿತ ಕಂಡು ಬರಲಿದೆ. ಇದಲ್ಲದೇ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಮಾಣ ಏರುತ್ತಲೇ ಇದೆ. ಮುಂದಿನ ವಾರದಲ್ಲಿ ಬಿಸಿಲಿನ ಪ್ರಮಾಣ ಇನ್ನಷ್ಟು ಏರಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

Published by HT Digital Content Services with permission from HT Kannada....