Bangalore, ಫೆಬ್ರವರಿ 17 -- Karnataka Weather: ಕರ್ನಾಟಕದಲ್ಲಿ ಬಿಸಿಲ ಪ್ರಮಾಣ ಫೆಬ್ರವರಿ ಮೂರನೇ ವಾರ ಎನ್ನುವ ಹೊತ್ತಿಗೆ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚುತ್ತಲೇ ಇದೆ. ಈಗಾಗಲೇ ಎರಡು ವಾರದಿಂದ ಬಿಸಿಲ ವಾತಾವರಣ ಕಂಡಿರುವ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಉಷ್ಣಾಂಶದ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಿದೆ. ಕಲಬುರಗಿ ಜಿಲ್ಲೆಯಲ್ಲಿ ಉಷ್ಣಾಂಶದ ಪ್ರಮಾಣ 37 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ. ಇದರೊಟ್ಟಿಗೆ ಉತ್ತರ ಕರ್ನಾಟಕದ ಬಾಗಲಕೋಟೆ. ಧಾರವಾಡ ಸಹಿತ ಹಲವು ಕಡೆಗಳಲ್ಲೂ ಉಷ್ಣಾಂಶದಲ್ಲಿ ಹೆಚ್ಚಳ ಕಂಡಿದೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲೂ ಬಿಸಿಲಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು ಜನ ಈಗಲೇ ಬಿಸಿಲಿನಿಂದ ಬಳಲುವ ಸನ್ನಿವೇಶ ಎದುರಾಗಿದೆ. ಕರಾವಳಿ ಭಾಗದ ಕಾರವಾರದಲ್ಲೂ ಉಷ್ಣಾಂಶದ ಪ್ರಮಾಣ ಏರುಮುಖದಲ್ಲಿದೆ. ಬೆಂಗಳೂರಿನಲ್ಲಿ ಉಷ್ಣಾಂಶದ ಏರಿಳಿತ ಕಂಡು ಬಂದಿದೆ.

Published by HT Digital Content Services with permission from HT Kannada....