ಭಾರತ, ಮಾರ್ಚ್ 24 -- ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ನಾಯಕರ ವೇತನದಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಕಳೆದ ವಾರ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಎರಡು ನಿರ್ಣಾಯಕ ಮಸೂದೆಗಳ ಅಂಗೀಕಾರದ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ. ಪರಿಷ್ಕೃತ ವೇತನ ರಚನೆಯು ರಾಜ್ಯ ಖಜಾನೆಯ ಮೇಲೆ ವರ್ಷಕ್ಕೆ 62 ಕೋಟಿ ರೂ ಹೆಚ್ಚುವರಿ ಆರ್ಥಿಕ ಹೊರೆ ಹೇರಲಿದೆ.

ಕರ್ನಾಟಕ ಶಾಸಕಾಂಗಗಳ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು ತಿದ್ದುಪಡಿ ಮಸೂದೆ 2025 ಹಾಗೂ ಕರ್ನಾಟಕ ಸಚಿವರ ವೇತನಗಳು ಮತ್ತು ಭತ್ಯೆಗಳು ತಿದ್ದುಪಡಿ ಮಸೂದೆ 2025, ಶಾಸಕರ ವೇತನದಲ್ಲಿ ಗಣನೀಯ ಏರಿಕೆಗೆ ಅನುವು ಮಾಡಿಕೊಟ್ಟಿದೆ. ಈ ಮಸೂದೆಗಳ ಪ್ರಕಾರ ಶಾಸಕರು ಮತ್ತು ಸಚಿವರಿಗೆ ಮನೆ ಬಾಡಿಗೆ ಮತ್ತು ಪ್ರಯಾಣ ಭತ್ಯೆಗಳು ಸೇರಿದಂತೆ ಇತರ ಭತ್ಯೆಗಳನ್ನು ಸಹ ಹೆಚ್ಚಲಿವೆ.

ಈ ಪರಿಷ್ಕರಣೆಯ ಅತಿದೊಡ್ಡ ಫಲಾನುಭವಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಬ್ಬರು. ಈ ಹಿಂದೆ 75,000ರೂ ಇದ್ದ ...