ಭಾರತ, ಏಪ್ರಿಲ್ 18 -- ಕರ್ನಾಟಕ ಸಿಇಟಿ 2025: ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಒದಗಿಸುವುದಕ್ಕಾಗಿ ನಡೆಸುವ ಕರ್ನಾಟಕ ಸಿಇಟಿ ವಸ್ತ್ರಸಂಹಿತೆ ಅನುಷ್ಠಾನದ ಹೆಸರಿನಲ್ಲಿ ಜನಿವಾರ ತೆಗೆಸಿದ ಅಧಿಕಾರಿಗಳ ಕ್ರಮ ವಿವಾದಕ್ಕೀಡಾಗಿದೆ. ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಇಂತಹ ಘಟನೆಗಳು ವರದಿಯಾಗಿದ್ದು, ಬ್ರಾಹ್ಮಣ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ನಡುವೆ, ಸಿಇಟಿ ವಸ್ತ್ರಸಂಹಿತೆಯಲ್ಲಿ ಎಲ್ಲವೂ ಸ್ಪಷ್ಟವಾಗಿದ್ದು, ಅದರಲ್ಲಿ ಜನಿವಾರ, ಕಾಶಿದಾರ ಇತ್ಯಾದಿ ತೆಗೆಸಬೇಕು ಎಂಬ ನಿರ್ದೇಶನ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಹೀಗಾಗಿ, ಅನುಷ್ಠಾನ ಅಧಿಕಾರಿಗಳ ಅಧಿಕ ಪ್ರಸಂಗದ ನಡೆಯನ್ನು ಬ್ರಾಹ್ಮಣ ಮಹಾಸಭಾ ಖಂಡಿಸಿದೆ.

ಕರ್ನಾಟಕ ಸಿಇಟಿ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಶಿದಾರ ಕಡಿದು ಹಾಕಿದ್ದಾರೆ ಎಂದು ಶಿವಮೊಗ್ಗದ ಬ್ರಾಹ್ಮಣ ಸಮುದಾಯದವರು ಆರೋಪಿಸಿದ್ದು, ಜನಿವಾರ ತೆಗೆಯದ ಕಾರಣ ಪರೀಕ್ಷೆ ಬರೆಯಲು ಬಿಟ್ಟಿಲ್ಲ ಎಂದು ಬೀದರ್‌...