Shimoga, ಮಾರ್ಚ್ 12 -- ಬೆಂಗಳೂರು: ಕರ್ನಾಟಕದ ಜೈನಧರ್ಮ ಸಂಶೋಧನೆ ಹಾಗೂ ಸಂಸ್ಕೃತಿ ಕೆಲಸದಲ್ಲಿ ನಾಲ್ಕು ದಶಕದಿಂದಲೂ ಕೆಲಸ ಮಾಡುತ್ತಿರುವ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಪದ್ಮಶೇಖರ್‌ ಅವರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಂಚದಲ್ಲಿರುವ ಪುರಾತನ ಹೊಂಬುಜ ಜೈನ ಮಠದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2025ನೇ ಸಾಲಿನ ಸಿದ್ದಾಂತಕೀರ್ತಿ ಪ್ರಶಸ್ತಿಯನ್ನು ಪ್ರೊ.ಪದ್ಮಶೇಖರ್‌ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಶ್ರೀ ಮಠದ ಸಂಪ್ರದಾಯದಂತೆ ಹೊಂಬುಜ ಶ್ರೀ ಕ್ಷೇತ್ರದಲ್ಲಿ 2025ರ ಮಾರ್ಚ್‌ 21ರಂದು ನಡೆಯಲಿರುವ ವಾರ್ಷಿಕ ರಥಯಾತ್ರೆ ಮಹೋತ್ಸವ ಭಾಗವಾಗಿ ಪುಷ್ಪ ರಥೋತ್ಸವ ಆಯೋಜನೆಗೊಂಡಿದ್ದು. ಅಂದಿನ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೊಂಬುಜ ಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ತಿಳಿಸಿದ್ದಾರೆ.

ಪ್ರೊ.ಪದ್ಮಶೇಖರ್‌ ಅವರು ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿಯಾಗಿ ಜೈನ ಧರ್ಮ ಸಾಹಿತ್ಯ, ಸಂಶೋಧನೆ ಹಾಗು ಸಂಸ್ಕೃತಿಗೆ...