Bengaluru, ಮಾರ್ಚ್ 21 -- 18 BJP MLAs Suspended: ಕರ್ನಾಟಕ ವಿಧಾನಸಭೆ ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್‌ ಯು.ಟಿ ಖಾದರ್‌ ಆದೇಶ ನೀಡಿದ್ದಾರೆ. ಸ್ಪೀಕರ್​ ಯುಟಿ ಖಾದರ್ ಅವರು ಸದನದಲ್ಲಿ ಅಮಾನತುಗೊಳಿಸಿದವರನ್ನು ಹೆಸರು ಹೇಳುತ್ತಿದ್ದಂತೆಯೇ ಅವರು ಹೊರ ಹೋಗದ ಕಾರಣ ಮಾರ್ಷಲ್ಸ್ ಒಬ್ಬೊಬ್ಬರನ್ನೇ ಎತ್ತಿ ಸದನದಿಂದ ಹೊರ ಹಾಕಿದರು.

ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡ ಕಾರಣ ಸ್ಪೀಕರ್‌ ಆದೇಶ ಪ್ರಕಾರ 18 ಬಿಜೆಪಿ ಸದಸ್ಯರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಲಾಗಿರುತ್ತದೆ ಎಂದು ಸ್ಪೀಕರ್‌ ಹೇಳಿದರು.

ಡಾ. ಅಶ್ವಥ್ ನಾರಾಯಣ, ದೊಡ್ಡನಗೌಡ ಪಾಟೀಲ್, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ...