Bangalore, ಏಪ್ರಿಲ್ 7 -- ಬೆಂಗಳೂರಿನ ಹೊಮ್ಮೆಯ ವಿಧಾನಸೌಧವನ್ನು ರಾತ್ರಿ ಸಮಯದಲ್ಲಿ ನೋಡುವುದೇ ಚಂದ. ಬಗೆಬಗೆಯ ಬಣ್ಣಗಳಿಂದ ವಿಧಾನಸೌಧಕ್ಕೆ ಮತ್ತಷ್ಟು ಹೊಳಪು ಬಂದಿದೆ. ಹಸಿರು ಸೇರಿದಂತೆ ಹಲವು ಬಣ್ಣಗಳಲ್ಲಿ ವಿಧಾನಸೌಧ ಕಟ್ಟದ ಮಿಂಚಲಿದೆ.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಕೆ ಮಾಡಲಾದ ಬಣ್ಣಬಣ್ಣದ ವಿದ್ಯುತ್ ದೀಪಗಳು ಐತಿಹಾಸಿಕ ವಿಧಾನಸೌಧದ ಮೆರುಗನ್ನು ಹೆಚ್ಚಿಸುವ ಜೊತೆಗೆ ನೋಡಗರ ಕಣ್ಮನ ಸೆಳೆಯಲಿದೆ

ಮೊದಲೆಲ್ಲಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರ ಇರೋದು. ಈಗ ಶಾಶ್ವತವಾಗಿ ದೀಪಾಲಂಕಾರ ಇರುವುದರಿಂದ ವಿಭಿನ್ನ ಬಣ್ಣಗಳಲ್ಲಿ ನಮ್ಮ ಕಾರ್ಯಸೌಧವನ್ನು ಕಣ್ತುಂಬಿಕೊಳ್ಳಬಹುದು.

ವಿಧಾನಸೌಧವೀಗ ನಿಸ್ಸಂಶಯವಾಗಿ ಮತ್ತಷ್ಟು ಸುಂದರ, ಮನಮೋಹಕವಾಗಿದೆ.ವಿಧಾನಸೌಧದಲ್ಲಿ‌ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ವೀಕ್ಷಣೆಗೆ ಅರ್ಪಿಸಿ, ಶುಭ ಹಾರೈಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ.

ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರಕ್ಕೆ ಕಾಳಜಿ ವಹಿಸಿ...