Bengaluru, ಏಪ್ರಿಲ್ 17 -- ಬೆಂಗಳೂರು: ಕರ್ನಾಟಕ ಲಾರಿ ಮುಷ್ಕರ ಅಂತ್ಯವಾಗಿದೆ. ಡಿಸೇಲ್ ಬೆಲೆ ಇಳಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘವು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟಿದೆ. ಗುರುವಾರ (ಏಪ್ರಿಲ್ 17) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆಗಿನ ಮಾತುಕತೆ ಬಳಿಕ ಕರ್ನಾಟಕ ಲಾರಿ ಮುಷ್ಕರ ಅಂತ್ಯಗೊಳಿಸಿರುವುದಾಗಿ ಸಂಘದ ರಾಜ್ಯ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತ್ಯೇಕವಾಗಿ ಎರಡು ಬಾರಿ ಸಭೆ ನಡೆಸಿದ್ದರೂ ಮಾತುಕತೆ ವಿಫಲವಾಗಿತ್ತು. ಹೀಗಾಗಿ ಮುಷ್ಕರ ಮುಂದುವರಿದಿತ್ತು. ನಿನ್ನೆ (ಏಪ್ರಿಲ್ 16) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತುಕತೆ ನಡೆಸಿದ ಲಾರಿ ಮಾಲೀಕರ ಸಂಘ, ಅವರಿಗೆ ಮನವಿ ಸಲ್ಲಿಸಿ ಡೀಸೆಲ್ ಮೇಲಿನ ಸುಂಕ ಇಳಿಸುವಂತೆ ಆಗ್ರಹಿಸಿತ್ತು.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

Published by HT D...