Mysuru, ಏಪ್ರಿಲ್ 15 -- ಕರ್ನಾಟಕದಲ್ಲಿ ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ, ಅಂದಾಜು 6 ಲಕ್ಷ ಲಾರಿಗಳ ಸಂಚಾರ ಸ್ಥಗಿತವಾಗಿದೆ. ಮೈಸೂರು ಜಿಲ್ಲೆಯಲ್ಲಿ ಈ ಮುಷ್ಕರಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು, ಸುಮಾರು 9000 ಗೂಡ್ಸ್ ಲಾರಿಗಳ ಓಡಾಟ ಸ್ಥಗಿತವಾಗಿದೆ.

ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ಹೇರಲಾಗಿದ್ದು, ಲಾರಿ ಮಾಲೀಕರು ಹಾಗೂ ಚಾಲಕರು ಕೂಡ ಇದಕ್ಕೆ ಸ್ಪಂದಿಸಿದ್ದಾರೆ. ಈ ನಡುವೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆಗೆ ಲಾರಿ ಚಾಲಕ, ಮಾಲೀಕರ ಸಂಘದ ಪ್ರತಿನಿಧಿಗಳ ಸಭೆ ನಡೆದಿದ್ದು, ಕೆಲವು ಬೇಡಿಕೆ ಈಡೇರಿಸಲು ಸಚಿವರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡೀಸೆಲ್ ದರ ಕಡಿಮೆ ಮಾಡಬೇಕು, ಟೋಲ್ ದರ ರದ್ದುಗೊಳಿಸಬೇಕು, ಆರ್‌ಟಿಒ ಗಡಿ ಚೆಕ್ ಪೋಸ್ಟ್ ರದ್ದುಗೊಳಿಸಬೇಕು, ಎಫ್‌ಸಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವತೆ ಒತ್ತಾಯಿಸಿ ಲಾರಿ ಮಾಲೀಕರು ಹಾಗೂ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ.

ಮೈಸೂರಿನ ಬನ್ನಿಮಂಟಪದ ಗೂ...