Bengaluru, ಮಾರ್ಚ್ 21 -- ಕರ್ನಾಟಕದ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ ಮಾಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಇದೇ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಎರಡು ಮಸೂದೆ ಮಂಡನೆಯಾಗಲಿದೆ. ಇದರಂತೆ, ವೇತನ ಯಾರಿಗೆ ಎಷ್ಟಾಗಲಿದೆ ಎಂಬುದು ಕುತೂಹಲ ಕೆರಳಿಸುವ ವಿಚಾರ.

ಸಭಾಧ್ಯಕ್ಷ, ಸಭಾಪತಿ ವೇತನ ಈಗ 75000 ರೂಪಾಯಿ ಇದೆ. ಪ್ರಸ್ತಾವಿತ ಹೆಚ್ಚಳದ ಪ್ರಕಾರ 1.25 ಲಕ್ಷ ರೂಪಾಯಿ ಆಗಿಲಿದೆ. ಇದೇ ರಿತಿ ಸಭಾಧ್ಯಕ್ಷ, ಸಭಾಪತಿ ಅತಿಥಿ ಭತ್ಯೆ 4 ಲಕ್ಷ ರೂಪಾಯಿ ಇರೋದು 5 ಲಕ್ಷ ರೂಪಾಯಿ ಆಗಲಿದೆ. ಸಭಾಧ್ಯಕ್ಷ, ಸಭಾಪತಿ, ಉಪಸಭಾಧ್ಯಕ್ಷ,ಉಪ ಸಭಾಪತಿ, ವಿಪಕ್ಷದ ನಾಯಕ, ಸರ್ಕಾರದ ಮುಖ್ಯ ಸಚೇತಕ, ವಿಪಕ್ಷ ಮುಖ್ಯ ಸಚೇತಕರ ಮನೆ ಬಾಡಿಗೆ 1.6 ಲಕ್ಷ ರೂಪಾಯಿ ಇರುವಂಥದ್ದು 2.5 ಲಕ್ಷ ರೂಪಾಯಿ ಆಗಲಿದೆ.

ವಿಧಾನ ಪರಿಷತ್ ಮತ್ತು ವಿಧಾನ ಸಭೆ ವಿಪಕ್ಷ ನಾಯಕರ ವೇತನ 60,000 ರೂಪಾಯಿ ಇದೆ. 80,000 ರೂಪಾಯಿ ಆಗಲಿದೆ. ಉಪ ಸಭಾಧ್ಯಕ್ಷ, ಉಪ ಸಭಾಪತಿಗಳ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಆಗಲಿದೆ.

ಉ...