ಭಾರತ, ಫೆಬ್ರವರಿ 6 -- Karnataka Budget 2025: ಕರ್ನಾಟಕ ಬಜೆಟ್ 2025 ಮಾರ್ಚ್ 7 ರಂದು ಮಂಡನೆಯಾಗುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಫೆ 6) ಆಯ-ವ್ಯಯ ಪೂರ್ವ ಸಮಾಲೋಚನೆಗಳನ್ನು ಶುರುಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೆ ಮಂಡಿ ನೋವಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹಿಂದಿರುಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನ ವಿಶ್ರಾಂತಿ ಪಡೆದು ಇಂದು (ಫೆ 6) ಕಾವೇರಿ ನಿವಾಸದಲ್ಲಿ ಇಲಾಖಾವಾರು ಅಧಿಕಾರಿಗಳ ಜತೆಗೆ ಸಭೆ ಶುರುಮಾಡಿಕೊಂಡಿದ್ದಾರೆ.

ಕರ್ನಾಟಕ ಬಜೆಟ್ 2025-26ಕ್ಕೆ ಸಂಭಂಧಿಸಿದಂತೆ ಇಂದಿನಿಂದ (ಫೆ.6) 14ರ ತನಕ ಆಯವ್ಯಯ ಪೂರ್ವಭಾವಿ ಚರ್ಚೆ ನಿಗದಿಯಾಗಿದೆ. ಶಕ್ತಿ ಭವನದಲ್ಲಿ ಸಭೆ ನಿಗದಿಯಾಗಿತ್ತಾದರೂ, ಮುಖ್ಯಮಂತ್ರಿಯವರ ಅನುಕೂಲಕ್ಕಾಗಿ ಕಾವೇರಿ ನಿವಾಸದಲ್ಲೇ ಸಭೆ ನಡೆದಿದೆ. ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತು ಒಟ್ಟು ಐದು ದಿನ ಇಲಾಖಾವಾರು ಆಯವ್ಯಯ ಸಿದ್ಧತಾ ಸಭೆ ನಡೆಯಲಿದೆ.

ಫೆ.6 ರಿಂದ ಫೆ.8ರವರೆಗೆ ಮೂರು ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಇಲಾಖಾವಾರು ಸಭೆಗಳನ್ನು ಸ...