ಬೆಂಗಳೂರು,Bengaluru, ಮಾರ್ಚ್ 7 -- Karnataka Budget 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 7) ಕರ್ನಾಟಕ ಬಜೆಟ್ 2025-26 ಮಂಡಿಸಿದ್ದು, ಬಜೆಟ್ ಭಾಷಣದ ಆರಂಭದಲ್ಲಿ 5 ಗ್ಯಾರೆಂಟಿ ಯೋಜನೆಗಳ ವಿಚಾರ ಪ್ರಸ್ತಾಪಿಸಿದರು. ಇದನ್ನು ಸಮರ್ಥಿಸಿಕೊಳ್ಳುತ್ತ ಸಿಎಂ ಸಿದ್ದರಾಮಯ್ಯ ಅವರು "'ಬಲಿಷ್ಠವಾದುದು ಮಾತ್ರ ಬದುಕುತ್ತದೆ' ಎಂಬುದು ಮೃಗೀಯ ತತ್ವ. ಮನುಷ್ಯ ಸಮಾಜದಲ್ಲೂ ಈ ರೀತಿಯಾದರೆ ಅದನ್ನು 'ಸೋಷಿಯಲ್ ಡಾರ್ವಿನಿಸಂ' ಎನ್ನಲಾಗುತ್ತದೆ. ಈ ತತ್ವಕ್ಕೆ ವಿರುದ್ಧವಾಗಿ ಮಾನವೀಯ ನೆಲೆಯಲ್ಲಿ ಸಮಸಮಾಜದ ಆಶಯದ ಮೇಲೆ ದೇಶ ಕಟ್ಟಲು ಬಾಬಾ ಸಾಹೇಬರು ಸಂವಿಧಾನ ರಚಿಸಿಕೊಟ್ಟಿದ್ದಾರೆ" ಎಂದು ಹೇಳಿದರು.

ಸೋಷಿಯಲ್ ಡಾರ್ವಿನಿಸಂ ಅಥವಾ ಸಾಮಾಜಿಕ ಡಾರ್ವಿನಿಸಂ ಎನ್ನುವುದು ಡಾರ್ವಿನ್‌ನ ವಿಕಾಸದ ಸಿದ್ಧಾಂತವನ್ನು ಮಾನವ ಸಮಾಜ, ಅರ್ಥಶಾಸ್ತ್ರ ಮತ್ತು ರಾಜಕೀಯಕ್ಕೆ ಅನ್ವಯಿಸುವ ವಿಚಾರಗಳ ಗುಂಪಾಗಿದೆ. ಇದು ಹೆಚ್ಚಾಗಿ "ಸರ್ವೈವಲ್ ಆಫ್ ದಿ ಫಿಟೆಸ್ಟ್" ಎಂಬ ಕಲ್ಪನೆಯೊಂದಿಗೆ ಸಂಬಂಧ ಹೊಂದಿರುವಂಥದ್ದು. ವ್ಯಕ್ತಿಗಳು, ಗುಂಪುಗಳು ...