Bengaluru, ಫೆಬ್ರವರಿ 16 -- ಕರ್ನಾಟಕ ಬಜೆಟ್ 2024: ಕರ್ನಾಟಕ ಸರ್ಕಾರದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರ (ಫೆ 16) ಕರ್ನಾಟಕದ 2024-25ನೇ ಹಣಕಾಸು ವರ್ಷದ ಬಜೆಟ್ (Karnataka Budget 2024) ಮಂಡಿಸಿದರು. ಜನಪ್ರಿಯ 'ಗ್ಯಾರೆಂಟಿ'ಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಮತ್ತು ಯುವನಿಧಿ ಯೋಜನೆಗಳನ್ನು ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡರು. 'ಬಿಟ್ಟಿ ಭಾಗ್ಯ' ಎಂದು ಟೀಕಿಸುತ್ತಿದ್ದ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕ ಬಜೆಟ್‌ನ ಪ್ರಮುಖ ಘೋಷಣೆಗಳು, ರಾಜಕೀಯ ಒಳನೋಟ, ಬಜೆಟ್ ಗಾತ್ರ, ಸರ್ಕಾರದ ಆದಾಯ- ವೆಚ್ಚಗಳ ವಿವರ, ಘೋಷಣೆಯಾದ ಪ್ರಮುಖ ಯೋಜನೆಗಳು ಸೇರಿದಂತೆ ಹಣಕಾಸು ಸಚಿವರ ಬಜೆಟ್ ಭಾಷಣದ ಕ್ಷಣಕ್ಷಣದ ಮಾಹಿತಿ, ಲೈವ್‌ ಅಪ್‌ಡೇಟ್ಸ್‌ ಇಲ್ಲಿ ಲಭ್ಯ. -Karnataka Budget 2024 Live Updates

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ...