ಭಾರತ, ಮಾರ್ಚ್ 7 -- Karnataka Budget 2025: ಕರ್ನಾಟಕದಲ್ಲಿ ಪ್ರಸವದ ವೇಳೆ ತಾಯಿ ಮರಣ ಹೊಂದುವ ಪ್ರಮಾಣ ತುಸು ಹೆಚ್ಚಿದ್ದು, ತಾಯಿಯ ಆರೋಗ್ಯ ಕಾಪಾಡುವ ಹಾಗೂ ತಾಯಿ ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿದೆ. ಈ ಸಲದ ಕರ್ನಾಟಕ ಬಜೆಟ್‌ನಲ್ಲಿ ತಾಯಿ ಮರಣ ಪ್ರಮಾಣ ನಿಲ್ಲಿಸುವ ಅಭಿಯಾನಕ್ಕೆ 320 ಕೋಟಿ ರೂ ಅನುದಾನ ಹಂಚಿಕೆ ಮಾಡಲಾಗಿದೆ. ಈ ಅಭಿಯಾನದಲ್ಲಿ 4 ಉಪಕ್ರಮಗಳನ್ನು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದರು. ಕರ್ನಾಟಕದ ಸರ್ಕಾರದ ಮಾಹಿತಿ ಪ್ರಕಾರ, 2024ರ ಏಪ್ರಿಲ್ 1 ರಿಂದ ನವೆಂಬರ್ ತನಕ 348 ತಾಯಿ ಮರಣ ಪ್ರಕರಣ ದಾಖಲಾಗಿದೆ. ಇದು 1 ಲಕ್ಷ ಪ್ರಸವದಲ್ಲಿ 64 ತಾಯಂದಿರು ಮೃತಪಟ್ಟ ರೀತಿ ದಾಖಲಾಗಿದೆ. ಈ ಪ್ರಮಾಣ 2020-21ರಲ್ಲಿ 84 ಇತ್ತು.

ಆರೋಗ್ಯವಂತ ಜನರಿಂದ ಮಾತ್ರ ಸಮತೋಲಿತ ಸಮಾಜ ನಿರ್ಮಾಣ ಸಾಧ್ಯ ಎಂದು ನಾವು ನಂಬಿದ್ದೇವೆ. ಜನನದಿಂದ ಎಲ್ಲಾ ವಯೋಮಾನದವರಿಗೂ ವರ್ಗಬೇಧವಿಲ್ಲದೇ, ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸಲು ನ...