ಭಾರತ, ಮಾರ್ಚ್ 7 -- ಸಿಎಂ ಸಿದ್ದರಾಮಯ್ಯ ಇಂದು (ಮಾರ್ಚ್‌ 7) 16ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಹಣಕಾಸು ಸಚಿವರೂ ಆಗಿರುವ ಅವರು ಈ ಬಾರಿಯ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಈ ಬಾರಿ ಸಿದ್ದರಾಮಯ್ಯ ಬರೋಬ್ಬರಿ 4,09,549 ಕೋಟಿ ರೂಪಾಯಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಬಜೆಟ್‌ನಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ಹಂಚಿಕೆಯಾಗಿದೆ, ಯಾವ ಕ್ಷೇತ್ರಗಳಿಂದ ಹಣ ಹರಿದು ಬಂದಿದೆ ಎಂಬ ಆಯವ್ಯಯದ ಲೆಕ್ಕಾಚಾರ ಇಲ್ಲಿದೆ.

2025-26ರ ಬಜೆಟ್‌ನಲ್ಲಿ ಒಟ್ಟಾರೆ ಹಂಚಿಕೆಯ ಚಿತ್ರಣ ಹೀಗಿದೆ. ಪಶುಸಂಗೋಪನೆ ಶೇ 1, ಕೃಷಿ ತೋಟಗಾರಿಕೆ ಶೇ 2, ಆಹಾರ ನಾಗರಿಕ ಸರಬರಾಜು ಶೇ 4, ಲೋಕೋಪಯೋಗಿ ಶೇ 4, ಸಮಾಜ ಕಲ್ಯಾಣ ಶೇ 4, ಕಂದಾಯ ಶೇ 4, ಆರೋಗ್ಯ ಕುಟುಂಬ ಶೇ 5, ಒಳಾಡಳಿತ ಸಾರಿಗೆ ಶೇ 5, ನಗರಾಭಿವೃದ್ಧಿ ವಸತಿ ಶೇ 5, ನೀರಾವರಿ ಶೇ 5, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಶೇ 6, ಇಂಧನ ಶೇ 6, ಮಹಿಳಾ-ಮಕ್ಕಳ ಕಲ್ಯಾಣ ಶೇ 8, ಶಿಕ್ಷಣ ಶೇ 10, ಇತರೆ ಶೇ 35.

ಈ ಬಾರಿ ರಾ...