ಭಾರತ, ಮಾರ್ಚ್ 7 -- Karnataka Budget 2025: ಅಂತಾರಾಷ್ಟ್ರೀಯ ಮಹಿಳಾ ದಿನ (ಮಾರ್ಚ್ 8)ದ ಮುನ್ನಾ ದಿನವಾದ ಇಂದು (ಮಾರ್ಚ್ 7) ಕರ್ನಾಟಕ ಬಜೆಟ್‌ 2025-26 ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು. ಮುಂದಿನ ಹಣಕಾಸು ವರ್ಷದ ನೋಟ ಒದಗಿಸುವ ಬಜೆಟ್‌ನಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94,084 ಕೋಟಿ ರೂಪಾಯಿ ಹಂಚಿಕೆಯಾಗಿದೆ. ಗೃಹಲಕ್ಷ್ಮಿ ಯೋಜನೆ ಮುಂದುವರಿಸಲಾಗಿದೆ. ಹಾಗಾದರೆ, ಈ ಸಲದ ಮಹಿಳಾ ದಿನಾಚರಣೆಗೆ (Women's Day) ಗೃಹಲಕ್ಷ್ಮಿ ಹೊರತಾಗಿ ಮಹಿಳೆಯರಿಗೇನು ಗಿಫ್ಟ್‌ ಏನು ಎಂಬ ಕುತೂಹಲ ಸಹಜ. ಆ ವಿವರ ಹೀಗಿದೆ.

ಕರ್ನಾಟಕದಲ್ಲಿ ಪ್ರತಿ ಮನೆಯ ಯಜಮಾನಿ ಫಲಾನುಭವಿಯಾಗಬೇಕು ಎಂಬ ಉದ್ದೇಶದೊಂದಿಗೆ ಗೃಹಲಕ್ಷ್ಮಿ ಯೋಜನೆಯನ್ನು 2023-24ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 2024-25ನೇ ಸಾಲಿನಲ್ಲಿ 1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಧನಸಹಾಯ ಒದಗಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 28,608 ಕೋಟಿ ರೂ. ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬ...