ಭಾರತ, ಮಾರ್ಚ್ 7 -- ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ದಾಖಲೆಯ 16ನೇ ಬಜೆಟ್‌ನಲ್ಲಿ ಎತ್ತಿನಹೊಳೆ 241ನೇ ಕಿ.ಮೀ ವರೆಗೂ ನೀರು ಹರಿಸುವುದರಿಂದ ತುಮಕೂರು ಜಿಲ್ಲೆಗೆ ಅನುಕೂಲವಾಗಲಿದೆ, ಈ ಯೋಜನೆಯಡಿ 533 ಕೋಟಿ ರೂ. ವೆಚ್ಚದಲ್ಲಿ ಕೊರಟಗೆರೆ, ಮಧುಗಿರಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ನಿಕಟಪೂರ್ವ ಅಧ್ಯಕ್ಷ ಟಿ.ಜೆ.ಗಿರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ನಿರೀಕ್ಷಿಸಿದಂತೆ ಜಿಲ್ಲೆಯಲ್ಲಿ ಐಟಿ ಹಬ್ ನಿರ್ಮಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ, ಟ್ರೇಡರ್ಸ್‌ಗಳಿಗೆ ಟ್ರೇಡ್ ಲೈಸೆನ್ಸ್‌ ಅಬಾಲಿಷ್, ಮೆಟ್ರೋ ರೈಲು ಸಂಪರ್ಕ ವಿಸ್ತರಿಸುವುದು, ಕೋಲ್ಡ್‌ ಸ್ಟೋರೇಜ್ ಸ್ಥಾಪನೆ, ಮಧುಗಿರಿ ಏಕಶಿಲಾ ಬೆಟ್ಟಕ್ಕೆರೋಪ್ ವೇ ಅಳವಡಿಸುವುದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ಜಿಲ್ಲೆಯ ಪ್ರಮುಖ ಬೆಳೆಗಳಾದ ತೆಂಗು, ಹುಣಿಸೆ, ಮಾವು, ಕಡಲೇಕಾಯಿ ಹಾಗೂ ಹಲಸು ಉತ್ಪನ್ನಗಳ ಅಭಿವೃದ್ಧಿ ಘಟಕಗಳ ಸ್ಥಾಪನೆ, ...