ಭಾರತ, ಮಾರ್ಚ್ 7 -- Karnataka Budget 2025: ಕರ್ನಾಟಕ ಬಜೆಟ್ 2025-26 ಮಂಡನೆಯಾಗಿದ್ದು, ಮಹಿಳಾ ಸಬಲೀಕರಣದ ಅಂಶಗಳೂ ಅದರಲ್ಲಿ ಪ್ರಸ್ತಾಪವಾಗಿದೆ. ಗೃಹಲಕ್ಷ್ಮಿʼ ಯೋಜನೆಯ ಯಜಮಾನಿಯರನ್ನು ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾ ಮಾಡಿ ʻಅಕ್ಕ ಕೋ-ಆಪರೇಟಿವ್ ಸೊಸೈಟಿʼ ವ್ಯಾಪ್ತಿಗೆ ತರುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು. ಇದಲ್ಲದೆ, 10 ನಗರಗಳಲ್ಲಿ ಪ್ರಾಯೋಗಿಕವಾಗಿ ಇಂದಿರಾ ಕ್ಯಾಂಟೀನ್ ನಡೆಸುವ ಗುತ್ತಿಗೆಯನ್ನೂ ಮಹಿಳೆಯರಿಗೆ ನೀಡುವುದಾಗಿ ಮುಖ್ಯಮಂತ್ರಿ ಬಜೆಟ್ ಭಾಷಣದಲ್ಲಿ ಹೇಳಿದರು.

1) ಗೃಹಲಕ್ಷ್ಮಿಯರ ಸ್ವಸಹಾಯ ಸಂಘ: ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ತ್ವರಿತ ಸಾಲ ಸೌಲಭ್ಯ ಒದಗಿಸಿ, ಆರ್ಥಿಕ ಅಗತ್ಯತೆಗಳ ಪೂರೈಕೆ ಮತ್ತು ಭದ್ರತೆ ಒದಗಿಸಿ, ಉಳಿತಾಯ ಮತ್ತು ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ʻಅಕ್ಕ ಕೋ-ಆಪರೇಟಿವ್ ಸೊಸೈಟಿʼ ಸ್ಥಾಪಿಸಲಾಗುವುದು. ʻಗೃಹಲಕ್ಷ್ಮಿʼ ಯೋಜನೆಯ ಯಜಮಾನಿಯರನ್ನು ಸ್ವಸಹಾಯ...