ಭಾರತ, ಮಾರ್ಚ್ 7 -- Karnataka Budget 2025: ಕರ್ನಾಟಕದ ಬಹು ನಿರೀಕ್ಷಿತ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 7, ಶುಕ್ರವಾರ) ಮಂಡಿಸಿದ್ದು, ಕಾರ್ಮಿಕ ವರ್ಗಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಮ್ಮ 16ನೇ ದಾಖಲೆಯ ಬಜೆಟ್ ನಲ್ಲಿ ಸಿದ್ದರಾಮಯ್ಯ, ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ ನೋಂದಾಯಿತ ಕಾರ್ಮಿಕರ ಅಲಂಬಿತರಿಗೆ ಪರಿಹಾರ ಮೊತ್ತವಾಗಿ ನೀಡಲಾಗುತ್ತಿದ್ದ 5 ಲಕ್ಷ ರೂಪಾಯಿಗಳ ಮಿತಿಯನ್ನು 8 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಕಾರ್ಮಿಕ ವರ್ಗಕ್ಕೆ ಇನ್ನೂ ಏನೆಲ್ಲಾ ಅನುದಾನ ಹಾಗೂ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದುಜಂಗಮವಾದರೂ ಕಾಯದಿಂದಲೇ ವೇಷಪಾಶ ಹರಿವುದು

ವಚನಕಾರ ನುಲಿಯ ಚಂದಯ್ಯ ಅವರ ಈ ನುಡಿಮುತ್ತನ್ನು ಹೇಳಿದ ಬಳಿಕ ಕಾರ್ಮಿಕರ ಯೋಜನೆಗಳು ಹಾಗೂ ಅನ...